ಕೊರೋನ ವೈರಸ್ ಕೇಂದ್ರ ವುಹಾನ್ ಹೊರ ಜಗತ್ತಿನಿಂದ ಪ್ರತ್ಯೇಕ

Update: 2020-01-23 16:47 GMT

ಬೀಜಿಂಗ್, ಜ. 23: ಮಾರಕ ಕೊರೋನ ವೈರಸ್‌ನ ಮೂಲವಾಗಿರುವ ಚೀನಾದ ನಗರ ವುಹಾನನ್ನು ಈಗ ಹೊರ ಜಗತ್ತಿನಿಂದ ಪ್ರತ್ಯೇಕಗೊಳಿಸಲಾಗಿದೆ. ಅಲ್ಲಿಂದ ಹೊರಹೋಗುವ ವಿಮಾನಗಳು ಮತ್ತು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ, ಸಬ್‌ವೇಗಳನ್ನು ಮುಚ್ಚಲಾಗಿದೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಅಲ್ಲಿ ವೈದ್ಯರು ದೇಹವಿಡೀ ಮುಚ್ಚುವ ದಿರಿಸುಗಳನ್ನು ತೊಟ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಕೊರೋನ ವೈರಸ್ ಈಗ ಚೀನಾವಿಡೀ ಮತ್ತು ಅದರ ಹೊರಗೂ ಹರಡಿದೆ. ಈಗಾಗಲೇ 17 ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ ಹಾಗೂ 500ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಸೋಂಕಿನ ಕೇಂದ್ರಬಿಂದು ಎಂಬುದಾಗಿ ಗುರುತಿಸಲಾಗಿರುವ ಮಹತ್ವದ ಪ್ರಯಾಣ ಕೇಂದ್ರ ವುಹಾನ್‌ನಲ್ಲೇ ಗರಿಷ್ಠ ಸೋಂಕು ಮತ್ತು ಸಾವಿನ ಪ್ರಕರಣಗಳು ಸಂಭವಿಸಿವೆ. ವುಹಾನ್‌ಗೆ ಭೇಟಿ ನೀಡಿದ ವಿದೇಶೀಯರಲ್ಲೂ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ, ಸೋಂಕಿಗೆ ಒಳಗಾದವರಲ್ಲಿ ಅಮೆರಿಕ ಮತ್ತು ಏಶ್ಯದ ಕೆಲವು ದೇಶಗಳ ಜನರೂ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News