ನೇಪಾಳದಲ್ಲಿ ಮೊದಲ ಕೊರೋನವೈರಸ್ ಪ್ರಕರಣ ಪತ್ತೆ
Update: 2020-01-25 22:03 IST
ಕಠ್ಮಂಡು (ನೇಪಾಳ), ಜ. 25: ನೇಪಾಳದಲ್ಲಿ ಮಾರಕ ಕೊರೋನವೈರಸ್ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆ. ಬಾಧಿತ ವ್ಯಕ್ತಿಯು ನೇಪಾಳಿ ವಿದ್ಯಾರ್ಥಿಯಾಗಿದ್ದು, ಅವರು ಇತ್ತೀಚೆಗೆ ಚೀನಾದ ವುಹಾನ್ ನಗರದಿಂದ ದೇಶಕ್ಕೆ ವಾಪಸಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವುಹಾನ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದ 31 ವರ್ಷದ ವಿದ್ಯಾರ್ಥಿ ಜನವರಿ 5ರಂದು ಅಲ್ಲಿಂದ ವಾಪಸಾಗಿದ್ದರು. ಅವರು ಉಸಿರಾಟದ ಸಮಸ್ಯೆಯೊಂದಿಗೆ ಜನವರಿ 13ರಂದು ಆಸ್ಪತ್ರೆಯೊಂದಕ್ಕೆ ಬಂದಿದ್ದರು ಎಂದು ‘ಕಠ್ಮಂಡು ಪೋಸ್ಟ್’ ವರದಿ ಮಾಡಿದೆ.