ನಮ್ಮ ಬೇಡಿಕೆಗಳಿಗೆ ಸಂಪೂರ್ಣ ತಿರಸ್ಕಾರ: ಗ್ರೆಟಾ ತನ್‌ಬರ್ಗ್

Update: 2020-01-25 16:42 GMT

ಡಾವೋಸ್ (ಸ್ವಿಟ್ಸರ್‌ಲ್ಯಾಂಡ್), ಜ. 25: ಭೂಗತ ಇಂಧನದ ಮೇಲೆ ಹೂಡಿಕೆ ಮಾಡುವುದನ್ನು ನಿಲ್ಲಿಸಿ ಎಂಬುದಾಗಿ ಡಾವೋಸ್‌ನಲ್ಲಿ ಸೇರಿರುವ ಉದ್ಯಮಿಗಳಿಗೆ ನಾವು ಮಾಡಿರುವ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಹೇಳಿದ್ದಾರೆ.

‘‘ನಾವು ಡಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನಕ್ಕೆ ಹಲವು ಬೇಡಿಕೆಗಳೊಂದಿಗೆ ಬಂದಿದ್ದೇವೆ. ಆದರೆ, ಈ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನಾವು ಇದನ್ನು ನಿರೀಕ್ಷಿಸಿರಲಿಲ್ಲ’’ ಎಂದು ಸಮ್ಮೇಳನದ ಕೊನೆಯ ದಿನವಾದ ಶುಕ್ರವಾರ ಡಾವೋಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರೆಟಾ ಹೇಳಿದರು.

ಅಮೆರಿಕದ ಖಜಾನೆ ಕಾರ್ಯದರ್ಶಿ ಮನುಚಿನ್‌ರ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದಾಗ, ‘‘ಅದನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಮ್ಮನ್ನು ಅವರು ಯಾವಾಗಲೂ ಹೀಗೆ ಟೀಕಿಸುತ್ತಲೇ ಇರುತ್ತಾರೆ. ಅದಕ್ಕೆ ನಾವು ಗಮನ ಕೊಟ್ಟರೆ ನಾವು ಏನು ಮಾಡುತ್ತಿದ್ದೇವೋ ಅದನ್ನು ಮಾಡಲು ನಮಗೆ ಸಾಧ್ಯವಾಗುವುದಿಲ್ಲ’’ ಎಂದು ಗ್ರೆಟಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News