​ಈ ವರ್ಷದಿಂದ 10 ಸಾವಿರ ಸ್ನಾತಕೋತ್ತರ ವೈದ್ಯ ಸೀಟ್ ಹೆಚ್ಚಳ

Update: 2020-01-26 03:47 GMT

ಹೊಸದಿಲ್ಲಿ : ಮುಂದಿನ ಶೈಕ್ಷಣಿಕ ವರ್ಷದಿಂದ ದೇಶದಲ್ಲಿ 10 ಸಾವಿರ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟುಗಳು ಹೆಚ್ಚಲಿವೆ. ಇದರಿಂದಾಗಿ ದೇಶಾದ್ಯಂತ ತಜ್ಞ ವೈದ್ಯರ ಲಭ್ಯತೆ ಹೆಚ್ಚಲಿದೆ. ಜತೆಗೆ ಜಿಲ್ಲಾ ನಿವಾಸ ಯೋಜನೆಯಡಿ ಕನಿಷ್ಠ ಮೂರು ತಿಂಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಸವೆ ಸಲ್ಲಿಸಲು ವೈದ್ಯರ ಲಭ್ಯತೆ ಕೂಡಾ ಹೆಚ್ಚಲಿದೆ.

ಭಾರತೀಯ ವೈದ್ಯಕೀಯ ಆಡಳಿತ ಮಂಡಳಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಆದರೆ ಜಿಲ್ಲಾ ನಿವಾಸ ಯೋಜನೆಯಡಿ ವೈದ್ಯರನ್ನು ಗ್ರಾಮೀಣ ಪ್ರದೇಶಗಳಿಗೆ ಕಳುಹಿಸಿಕೊಟ್ಟರೆ, ವೈದ್ಯಕೀಯ ಕಾಲೇಜುಗಳಿಗೆ ಜೋಡಿಕೊಂಡಿರುವ ಆಸ್ಪತ್ರೆಗಳಿಗೆ ವೈದ್ಯರ ಕೊರತೆ ಉದ್ಭವವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದೆ. ಪ್ರತಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ.

ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ನೇತೃತ್ವದ ಆಡಳಿತ ಮಂಡಳಿ, ಜಿಲ್ಲಾ ನಿವಾಸ ಯೋಜನೆಗೆ ಹಸಿರು ನಿಶಾನೆ ತೋರಿದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ದೃಢಪಡಿಸಿದ್ದಾರೆ. ದೇಶಾದ್ಯಂತ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 23 ಸಾವಿರ ಸ್ನಾತಕೋತ್ತರ ಹಾಗೂ 68,500 ವೈದ್ಯ ಪದವಿ ಸೀಟುಗಳು ಲಭ್ಯ.

ಜಿಲ್ಲಾ ನಿವಾಸ ಯೋಜನೆ ಈಗಾಗಲೇ ಚಾಲ್ತಿಯಲ್ಲಿದ್ದರೂ, ಆಡಳಿತ ಮಂಡಳಿ ಅನುಮೋದನೆಯು 2020-21ರಲ್ಲಿ ಸೀಟು ಹೆಚ್ಚಳಕ್ಕೆ ಅನುವು ಮಾಡಿಕೊಡಲಿದೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಭಾರತ ಶೇಕಡ 82ರಷ್ಟು ವಿಶೇಷ ತಜ್ಞರ ಕೊರತೆ ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News