ವೂಹಾನ್‌ನಿಂದ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ನಿರ್ಗಮನಕ್ಕೆ ಚೀನಾದ ಅನುಮತಿ ಕೋರಿದ ಭಾರತ

Update: 2020-01-26 17:25 GMT

 ಬೀಜಿಂಗ್,ಜ.26:ಕೊರೊನಾ ವೈರಸ್ ಚೀನಾದ ಇತರ ಭಾಗಗಳಿಗೂ ವ್ಯಾಪಕವಾಗಿ ಹರಡುತ್ತಿರುವಂತೆಯೇ, ಈ ಅಪಾಯಕಾರಿ ರೋಗದ ಕೇಂದ್ರತಾಣವಾದ ವೂಹಾನ್ ನಗರದಲ್ಲಿ ಸಿಲುಕಿಕೊಂಡಿರುವ 250ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ನಿರ್ಗಮಿಸಲು ಅನುಮತಿ ನೀಡುವಂತೆೆ ಭಾರತೀಯ ಚೀನಾ ಸರಕಾರಕ್ಕೆ ಮನವಿ ಮಾಡಿದೆ.

ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 700ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ವೂಹಾನ್ ಹಾಗೂ ಅದರ ಆಸುಪಾಸಿನಲ್ಲಿರುವ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿದ್ದಾರೆ.

ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದ ಚೀನಾ ಸರಕಾರವು 1.10 ಕೋಟಿಗೂ ಅಧಿಕ ಜನಸಂಖ್ಯೆಯಿರುವ ವೂಹಾನ್ ನಗರದಿಂದ ಯಾರೂ ಕೂಡಾ ಹೊರಹೋಗದಂತೆ ನಿರ್ಬಂಧ ವಿಧಿಸಿದೆ.

ಚೀನಾದ ಹೊಸ ವರ್ಷದ ರಜಾದಿನಗಳ ಹಿನ್ನೆಲೆಯಲ್ಲಿ ವೂಹಾನ್ ನಗರದಲ್ಲಿ ದ್ದ 700ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳಉ ತಾಯ್ನಾಡಿಗೆ ಈಗಾಗಲೇ ಹಿಂತಿರುಗಿದ್ದಾರೆ. ಆದಾಗ್ಯೂ ಇನ್ನೂ 250ರಿಂದ 300ರಷ್ಟು ಭಾರತೀಯ ವಿದ್ಯಾರ್ಥಿಗಳು ಇನ್ನೂ ವೂಹಾನ್ ಹಾಗೂ ಅದರ ಆಸುಪಾಸಿನ ನಗರಗಳಲ್ಲಿ ಇದ್ದಾರೆನ್ನಲಾಗಿದೆ.

ಕ್ಷಿಪ್ರವಾಗಿ ಹರಡುವ ಕೊರೊನಾ ವೈರಸ್ ಸೋಂಕು ಈಗಾಗಲೇ ವೂಹಾನ್ ನಗರದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಹೆತ್ತವರು ತೀವ್ರವಾಗಿ ಆತಂಕಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಚೀನಾ ಆಡಳಿತವು ಜನವರಿ 23ರಂದು ವೂಹಾನ್‌ನಿಂ ಜನರ ಆಗಮನ ಹಾಗೂ ನಿರ್ಗಮವನ್ನು ಸಂಪೂರ್ಣ ನಿಷೇಧಿಸಿದ್ದು, ಆ ನಗರ ಈಗ ವಸ್ತುಶಃ ದಿಗ್ಬಂಧನಕ್ಕೊಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News