2019ರಲ್ಲಿ 4,500 ಕೋಟಿ ರೂ. ನಷ್ಟ: ಬೋಯಿಂಗ್

Update: 2020-01-29 16:54 GMT

ವಾಶಿಂಗ್ಟನ್, ಜ. 29: ಬೃಹತ್ ವಿಮಾನ ತಯಾರಕ ಕಂಪೆನಿ ಬೋಯಿಂಗ್ ಬುಧವಾರ 20 ವರ್ಷಗಳಲ್ಲೇ ಮೊದಲ ಬಾರಿಗೆ ವಾರ್ಷಿಕ ನಷ್ಟ ಘೋಷಿಸಿದೆ. 737 ಮ್ಯಾಕ್ಸ್ ವಿಮಾನಗಳನ್ನು ಸುದೀರ್ಘ ಅವಧಿಗೆ ಹಾರಾಟದಿಂದ ಹೊರಗಿಟ್ಟಿರುವುದು ಆದಾಯವನ್ನು ತಗ್ಗಿಸಿದೆ ಹಾಗೂ ಖರ್ಚು ಹೆಚ್ಚಿಸಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ಒಂದು ಬಿಲಿಯ ಡಾಲರ್ (ಸುಮಾರು 7,100 ಕೋಟಿ ರೂಪಾಯಿ) ಹಾಗೂ ಇಡೀ 2019ರಲ್ಲಿ 636 ಮಿಲಿಯ ಡಾಲರ್ (ಸುಮಾರು 4,500 ಕೋಟಿ ರೂಪಾಯಿ) ನಷ್ಟ ಸಂಭವಿಸಿದೆ ಎಂದು ಬೋಯಿಂಗ್ ವರದಿ ಮಾಡಿದೆ.

ಇದಕ್ಕೆ ಮೊದಲು ಕಂಪೆನಿಯು 1997ರಲ್ಲಿ ವಾರ್ಷಿಕ ನಷ್ಟ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News