ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ಸೋಲು

Update: 2020-01-29 17:52 GMT

ಆಕ್ಲೆಂಡ್, ಜ.29: ಭಾರತದ ಮಹಿಳಾ ಹಾಕಿ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಇಲ್ಲಿ ಬುಧವಾರ ನಡೆದ ಮೂರನೇ ಪಂದ್ಯದಲ್ಲಿ 0-1 ಅಂತರದಿಂದ ಸೋಲುಂಡಿದೆ. ನ್ಯೂಝಿಲ್ಯಾಂಡ್‌ನ ಪರ ಹೋಪ್ ರಾಲ್ಫ್(37ನೇ ನಿಮಿಷ)ಏಕೈಕ ಗೋಲು ಬಾರಿಸಿದರು. ನ್ಯೂಝಿಲ್ಯಾಂಡ್ ಡೆವಲಪ್‌ಮೆಂಟ್ ತಂಡದ ವಿರುದ್ಧ ಆಡಿರುವ ಮೊದಲ ಪಂದ್ಯದಲ್ಲಿ ಭಾರತ 4-0 ಅಂತರದಿಂದ ಜಯ ಸಾಧಿಸಿತ್ತು. ಆದರೆ, ಎರಡನೇ ಪಂದ್ಯವನ್ನು 1-2 ಅಂತರದಿಂದ ಕಳೆದುಕೊಂಡಿದೆ. ಭಾರತ ಇಂದು ಪಂದ್ಯ ಆರಂಭವಾದ ತಕ್ಷಣ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಎರಡನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.

ಆ ಬಳಿಕ ನ್ಯೂಝಿಲ್ಯಾಂಡ್ ಎರಡು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸೃಷ್ಟಿಸಿದ್ದು, ಭಾರತದ ಬಲಿಷ್ಠ ಡಿಫೆನ್ಸ್ ವಿಭಾಗ ಕಿವೀಸ್‌ಗೆ ಗೋಲು ನಿರಾಕರಿಸಿತು. ಭಾರತ ತಂಡ ಫೆಬ್ರವರಿ 4ರಂದು ನಡೆಯಲಿರುವ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News