ಗಾಂಧಿ ಹತ್ಯೆ ಸಂಚಿನ ಸೂತ್ರಧಾರಿ ಯಾರು?

Update: 2020-01-29 18:29 GMT

‘ಯಶಸ್ವಿ ಹೋ ಹುವಾ (ಯಶಸ್ವಿಯಾಗು ಮತ್ತು ಹಿಂದಿರುಗಿ ಬಾ)

  - ಮಹಾತ್ಮಾ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಹಾಗೂ ಸಹಸಂಚುಕೋರ ನಾರಾಯಣ ದತ್ತಾತ್ರೆಯ ಅಪ್ಟೆಯನ್ನು ಬೀಳ್ಕೊಡುವ ಮುನ್ನ ವಿ.ಡಿ.ಸಾವರ್ಕರ್ ಈ ವಿದಾಯದ ಸಂದೇಶ ನೀಡಿದ್ದಾರೆಂದು ಹತ್ಯೆ ಪ್ರಕರಣದ ತನಿಖೆಯ ಕುರಿತಾದ ಪೊಲೀಸ್ ಕಡತಗಳಲ್ಲಿ ದಾಖಲಾಗಿದೆ.

ಹೊಸದಿಲ್ಲಿಯಲ್ಲಿ ಸಂಸತ್‌ಭವನದಿಂದ ಹೆಚ್ಚೆಂದರೆ ಎರಡು ಕಿ.ಮೀ. ದೂರದಲ್ಲಿ ಭಾರತೀಯ ಪತ್ರಾಗಾರ (ನ್ಯಾಶನಲ್ ಆರ್ಕೈವ್ಸ್ ಆಫ್ ಇಂಡಿಯಾ)ವಿದೆ. ಹಿಂದೂ ಬಲಪಂಥೀಯರ ‘ಐಕಾನ್’ ಆಗಿರುವ ಸಾವರ್ಕರ್‌ರಿಂದ ಹಿಡಿದು ದೇಶದ ಅತ್ಯಂತ ಧಾರುಣವಾದ ರಾಜಕೀಯ ಹತ್ಯೆಯ ಕುರಿತಾದ ಸಾವಿರಾರು ದಾಖಲೆಪತ್ರಗಳನ್ನು ಒಳಗೊಂಡ ಕಡತಗಳ ರಾಶಿಯೇ ಅಲ್ಲಿವೆ. ಧೂಳುತುಂಬಿದ ಕಡತಗಳು ಗಾಂಧಿ ಹತ್ಯೆ ತನಿಖೆಯಲ್ಲಿ ಸಾಕ್ಷಿಗಳ ಹೇಳಿಕೆಗಳು, ಪೊಲೀಸರ ದಾಖಲೆಗಳು ಹಾಗೂ ವಿಶೇಷ ತನಿಖಾ ದಳದ ವರದಿಗಳನ್ನು ಒಳಗೊಂಡಿವೆ. ನಾಥೂರಾಮ್ ಗೋಡ್ಸೆ, ಸಾವರ್ಕರ್‌ಗೆ ಅತ್ಯಂತ ನಿಕಟರಾಗಿದ್ದುದು ಮಾತ್ರವಲ್ಲ ಅವರು ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆಗೈಯುವ ಸಂಚಿನ ಭಾಗವಾಗಿದ್ದರೆಂಬುದನ್ನು ಈ ಕಡತಗಳು ಸಾಬೀತುಪಡಿಸುತ್ತವೆ.ವಾಸ್ತವವಾಗಿ ಸಾವರ್ಕರ್ ಅವರು 1948ರ, ಜನವರಿ 30ರಂದು ನಡೆದ ಮಹಾತ್ಮಾ ಗಾಂಧಿಯವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೊಳಗಾದ ಎಂಟನೇ ಆರೋಪಿಯಾಗಿದ್ದಾರೆ. ಆಂಗ್ಲ ನಿಯತಕಾಲಿಕ ಔಟ್‌ಲುಕ್ ಪರಿಶೀಲಿಸಿರುವ ಪತ್ರಾಗಾರದ ದಾಖಲೆಗಳನ್ನು ಈ ಕೆಳಗಿನ ಮಹತ್ವದ ಅಂಶಗಳನ್ನು ಅನಾವರಣಗೊಳಿಸುತ್ತದೆ.

ಸಾವರ್ಕರ್ ಗೋಡ್ಸೆಯ ಮಾರ್ಗದರ್ಶಕರಾಗಿದ್ದರು

ಗಾಂಧಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ವಿಶೇಷ ನ್ಯಾಯಾಲ ಯಕ್ಕೆ ಸಲ್ಲಿಕೆಯಾದ ದಾಖಲೆಗಳಲ್ಲಿ ಗೋಡ್ಸೆಯು ಸಾವರ್ಕರ್‌ಗೆ ಬರೆದ ಪತ್ರ ಕೂಡಾ ಇದ್ದಿತ್ತು. ಗಾಂಧೀಜಿಯವರ ಹಂತಕನಿಗೆ, ಹಲವು ವರ್ಷಗಳಿಂದ ಸಾವರ್ಕರ್ ಅವರ ಪರಿಚಯವಿತ್ತೆಂಬುದನ್ನು ಈ ಪತ್ರವು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ. ಹಿಂದೂ ರಾಷ್ಟ್ರವೆಂಬ ಸಮಾನ ಸೈದ್ಧಾಂತಿಕ ನಂಬಿಕೆಯು ಇವರಿಬ್ಬರ ನಡುವೆ ಈ ಗುರು-ಶಿಷ್ಯ ಸಂಬಂಧವು ಬೆಸೆದು ಕೊಳ್ಳುವಂತೆ ಮಾಡಿತ್ತು.

  ಸಾವರ್ಕರ್ ಅವರು ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಗೋಡ್ಸೆಯೇ ಈ ದೀರ್ಘ ಪತ್ರವನ್ನು ಬರೆದಿದ್ದನು. ಗೋಡ್ಸೆಯು ಬರೆದ ಪತ್ರದ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ‘‘ರತ್ನಗಿರಿಯಲ್ಲಿ ನೀವು ಗೃಹಬಂಧನದಿಂದ ಬಿಡುಗಡೆಗೊಂಡಾಗಿನಿಂದ, ‘ಹಿಂದೂಸ್ಥಾನವು ಹಿಂದೂಗಳಿಗೆ’ ಎಂಬುದನ್ನು ಪ್ರತಿಪಾದಿಸುವ ಸಮೂಹಗಳ ಮನದಲ್ಲಿ ಒಂದು ದೈವಿಕ ಅಗ್ನಿ ಪ್ರಜ್ವಲಿಸುತ್ತದೆ. ಹಿಂದೂ ಮಹಾಸಭಾದ ಅಧ್ಯಕ್ಷತೆಯನ್ನು ಒಪ್ಪಿಕೊಳ್ಳಲು ನೀವು ಯಾವ ಕಾರಣವನ್ನು ಪ್ರಕಟಿಸಿರುವಿರೋ, ಅದು ಕಾರ್ಯಗತಗೊಳ್ಳುವುದೆಂಬ ಭರವಸೆಯು ಮೂಡಿದೆ’’ ಎಂದು ಗೋಡ್ಸೆ ಬರೆದಿದ್ದನು.. ‘‘ನಾವು ‘ರಾಷ್ಟ್ರೀಯ ಸ್ವಯಂಸೇವಕ ಸೇನೆ’ಯನ್ನು ಹೊಂದಬೇಕು ಹಾಗೂ ಇದಕ್ಕಾಗಿ ಆರೆಸ್ಸೆಸ್‌ನ 50 ಸಾವಿರ ಸ್ವಯಂಸೇವಕರು ಸಿದ್ಧರಿದ್ದಾರೆ ಹಾಗೂ ಕಾಯುತ್ತಿದ್ದಾರೆ’’ ಎಂದು ಆತ ಪತ್ರದಲ್ಲಿ ಹೇಳಿದ್ದಾನೆ.

 ಹಿಂದುತ್ವದ ಧ್ಯೇಯಕ್ಕಾಗಿ ಹೋರಾಡುವವರಿಗೆ ಮಾರ್ಗದರ್ಶನ ನೀಡುವಂತೆ ಗೋಡ್ಸೆ ಪತ್ರದಲ್ಲಿ ಸಾವರ್ಕರ್ ಅವರನ್ನು ಆಗ್ರಹಿಸಿ ದ್ದಾನೆ. ಮಹಾತ್ಮಾಗಾಂಧಿ ಹತ್ಯೆ ಸಂಚಿನ ತನಿಖೆಯನ್ನು ನಡೆಸಿದ್ದ ಬಾಂಬೆ ಸ್ಪೆಶಲ್ ಬ್ರಾಂಚ್‌ನ ಜಮ್‌ಶೆಡ್ ನಗರವಾಲಾ ಅವರು ತನ್ನ ವರದಿಯಲ್ಲಿ ಹೀಗೆ ಟಿಪ್ಪಣಿ ಮಾಡಿದ್ದಾರೆ. ‘‘ಗೋಡ್ಸೆಯು 1935ರಿಂದೀಚೆಗೆ ಸಾವರ್ಕರ್ ಅವರ ರಾಜಕೀಯ ಸಿದ್ಧಾಂತಕ್ಕೆ ತನ್ನನ್ನೇ ಮುಡಿಪಾಗಿಟ್ಟಿದ್ದ. ಆತ (ಗೋಡ್ಸೆ) 1930ರಲ್ಲಿ ರತ್ನಗಿರಿಯಲ್ಲಿ ಶಾಖೆಯೊಂದನ್ನು ತೆರೆದಿದ್ದ’’.

ಸಾವರ್ಕರ್ ಬಗ್ಗೆ ಗೋಡ್ಸೆಗೆ ಎಷ್ಟು ಪೂಜ್ಯಭಾವನೆಯಿತ್ತೆಂದರೆ, ಆತ ತನ್ನ ಸುದ್ದಿಪತ್ರಿಕೆಯ ಶೀರ್ಷಿಕೆಯಲ್ಲಿ ಅವರ ಭಾವಚಿತ್ರವನ್ನು ಮುದ್ರಿಸಿದ್ದ. ಅಗ್ರಣಿ ಪತ್ರಿಕೆಗೆ ನಾಥೂರಾಮ್ ಗೋಡ್ಸೆ ಸಂಪಾದಕನಾಗಿ ದ್ದರೆ, ಅದನ್ನು ಪ್ರಕಟಿಸುತ್ತಿದ್ದ ಹಿಂದೂ ರಾಷ್ಟ್ರ ಪ್ರಕಾಶನ ಸಂಸ್ಥೆಗೆ, ಗಾಂಧಿ ಹತ್ಯೆ ಪ್ರಕರಣದ ಸಹ ಆರೋಪಿಯಾದ ಅಪ್ಟೆ ಮ್ಯಾನೇಜರ್ ಆಗಿದ್ದ. ಪತ್ರಿಕೆಗೆ ಆರ್ಥಿಕವಾಗಿ ನೆರವಾಗಲು ಸಾವರ್ಕರ್ ಅವರು 15 ಸಾವಿರ ರೂ.ಗಳನ್ನು ನೀಡಿದ್ದರು. ಆಗಿನ ಕಾಲಕ್ಕೆ ಅದು ದೊಡ್ಡ ಮೊತ್ತವೆಂದೇ ಹೇಳಬಹುದಾಗಿತ್ತು.

ಸಾವರ್ಕರ್ ಜೊತೆ ಗೋಡ್ಸೆ ನಿಕಟವಾಗಿ ಕೆಲಸ ಮಾಡಿದ್ದ

1946ರಲ್ಲಿ ಸಾವರ್ಕರ್‌ಗೆ ಗೋಡ್ಸೆ ಬರೆದಿದ್ದ ಪತ್ರವು ಇದನ್ನು ದೃಢ ಪಡಿಸುತ್ತದೆ. ಆ ಪತ್ರದಲ್ಲಿ ಆತ ದಿಲ್ಲಿಯ ಸೇಠ್ ಜುಗಲ್ ಕಿಶೋರ್ ಬಿರ್ಲಾ ಅವರಿಂದ ಸಾವರ್ಕರ್ ಅವರು 1 ಸಾವಿರ ರೂ. ಮೊತ್ತದ ಚೆಕ್ ಅನ್ನು ಪಡೆದಿರುವ ಬಗ್ಗೆ ಉಲ್ಲೇಖಿಸಿದ್ದಾನೆ. ಈ ಹಣವನ್ನು ಗೋಡ್ಸೆಗೆ ಪಾವತಿಸುವಂತೆಯೂ ಸಾವರ್ಕರ್ ಅನುಮೋದಿಸಿದ್ದರು. ಈ ವ್ಯವಹಾರ ನಡೆದಿರುವುದನ್ನು ಪತ್ರವು ದೃಢಪಡಿಸುತ್ತದೆೆ.

 ಪೊಲೀಸ್ ದಾಖಲೆಗಳ ಪ್ರಕಾರ ಗೋಡ್ಸೆ ಹಾಗೂ ಅಪ್ಟೆ ಅವರು ಸಾವರ್ಕರ್‌ಗೆ ತುಂಬಾ ನಿಕಟರಾಗಿದ್ದರು. ಅವರಿಬ್ಬರೂ ಸಾವರ್ಕರ್ ಜೊತೆಗೆ ಅಧಿಕೃತ ಪ್ರವಾಸಗಳನ್ನು ಕೈಗೊಂಡಿದ್ದರು. ಗಾಂಧಿ ಹತ್ಯೆಗೆ ಐದು ತಿಂಗಳುಗಳ ಮೊದಲು ಅಂದರೆ ಆಗಸ್ಟ್ 1947ರಂದು ಅವರು ಕೊನೆಯ ಬಾರಿಗೆ ಜೊತೆಯಾಗಿ ಪ್ರವಾಸ ಕೈಗೊಂಡಿದ್ದರು. ಹತ್ಯೆ ಸಂಚಿನಲ್ಲಿ ತನ್ನ ಪಾತ್ರವಿರುವುದನ್ನು ಸಾವರ್ಕರ್ ಬಲವಾಗಿ ನಿರಾಕರಿಸಿದ್ದರಾದರೂ, ಪೊಲೀಸರು ಹಾಗೂ ವಿಚಾರಣೆಯ ಸಂದರ್ಭದಲ್ಲಿ ತಾನು ನೀಡಿದ ಹೇಳಿಕೆಗಳಲ್ಲಿ ಅವರು ಹಂತಕನನ್ನು ಗೌರವಯುತವಾಗಿ ಪಂಡಿತ್ ನಾಥೂರಾಮ್ ಎಂದು ಸಂಬೋಧಿಸಿದ್ದರು.

ಸಾವರ್ಕರ್ ಅವರಿಗೆ ಮಹಾತ್ಮಾ ಗಾಂಧಿ ಹತ್ಯೆ ಸಂಚಿನ ಅರಿವಿತ್ತು

 ಗಾಂಧೀಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಗಿನ ಬಾಂಬೆ ಸಂಸ್ಥಾನದಲ್ಲಿ ಗೃಹಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರು ಹಸ್ತಾಂತರಿಸಿದ ಮಾಹಿತಿಯೊಂದಿಗೆ ಡಿಸಿಪಿ ನಗರ್‌ವಾಲಾ ಅವರ ತನಿಖಾ ವರದಿ ಆರಂಭಗೊಳ್ಳುತ್ತದೆ. ಜನವರಿ 20ರಂದು ಮಹಾತ್ಮಾ ಗಾಂಧಿಯವರ ಹತ್ಯೆಗೆ ಮೊದಲ ಯತ್ನ ನಡೆದಿರುವ ಕುರಿತ ವಿವರಗಳನ್ನು ಅವರು ನೀಡಿದ್ದಾರೆ. ‘‘20.1.48ರಂದು ಮದನ್‌ಲಾಲ್ ಹಾಗೂ ಆತನ ಸಹಚರರಾದ ಕರ್ಕರೆ ಮತ್ತಿತರರಿಂದ ಮಹಾತ್ಮಾಜಿ ಅವರ ಪ್ರಾಣಹಾನಿಗೆ ಪ್ರಯತ್ನ ನಡೆದಿತ್ತೆಂಬ ಕುರಿತು ತನಗೆ ನಿಖರವಾದ ಮಾಹಿತಿ ದೊರೆತಿರುವುದಾಗಿ ಗೃಹ ಸಚಿವರು ನನಗೆ ತಿಳಿಸಿದ್ದರು. ಗಾಂಧೀಜಿಯವರ ಹತ್ಯೆ ಯತ್ನ ನಡೆಸುವುದಕ್ಕೆ ದಿಲ್ಲಿಗೆ ನಿರ್ಗಮಿಸುವ ಸ್ವಲ್ಪ ಮುನ್ನ ಮದನ್‌ಲಾಲ್ ಹಾಗೂ ಕರ್ಕರೆ ಅವರು ಸಾವರ್ಕರ್‌ರನ್ನು ಕಂಡಿದ್ದರು ಎಂದು ಅವರು (ಗೃಹಸಚಿವ) ನನಗೆ ಹೇಳಿದ್ದರು’’ ಎಂದು ನಗರವಾಲಾ ತನ್ನ ವರದಿಯಲ್ಲಿ ತಿಳಿಸಿದ್ದಾರೆ.

ಸಾವರ್ಕರ್‌ಗೆ ಈ ಸಂಚಿನ ಸಂಪೂರ್ಣ ಅರಿವಿತ್ತೆಂಬ ಮಾಹಿತಿ ನಗರವಾಲಾ ಅವರಿಗೆ ಲಭಿಸಿತ್ತು. ಸಾವರ್ಕರ್ ಅವರ ನೇರ ಪ್ರಚೋದನೆ ಹಾಗೂ ಸೂಚನೆಯ ಮೇರೆಗೆ ಮಹಾತ್ಮಾ ಗಾಂಧೀಜಿಯವರ ಹತ್ಯೆ ಸಂಚನ್ನು ರೂಪಿಸಲಾಗಿತ್ತು ಹಾಗೂ ಅದಕ್ಕಾಗಿ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ತನ್ನ ಪಾತ್ರವನ್ನು ಮರೆಮಾಚುವುದಕ್ಕಾಗಿಯೇ ಸಾವರ್ಕರ್ ಅವರು ತಾನು ಅಸ್ವಸ್ಥ ಹಾಗೂ ರಾಜಕೀಯದಿಂದ ದೂರವಿರುವುದಾಗಿ ಸೋಗುಹಾಕಿದ್ದರು... ಹೀಗಾಗಿ ಸಾವರ್ಕರ್ ಅವರ ನಿವಾಸದ ಮೇಲೆ ತಕ್ಷಣವೇ ನಿಗಾವಿರಿಸಲು ನಿರ್ಧರಿಸಲಾಯಿತು’’ ಎಂದು ನಗರವಾಲಾ ವರದಿಯಲ್ಲಿ ತಿಳಿಸಿದ್ದಾರೆ.

 ‘‘ಮಹಾತ್ಮಾ ಗಾಂಧಿ ಹತ್ಯೆ ಸಂಚಿನ ಮುಖ್ಯ ಸೂತ್ರಧಾರಿಗಳಿಗೆ ದೊಡ್ಡ ಸಂಖ್ಯೆಯ ಅಸಂತುಷ್ಟ ಪಂಜಾಬಿಗಳು ಹಾಗೂ ಆರೆಸ್ಸೆಸ್‌ನೊಳಗಿನ ರಹಸ್ಯ ಸಂಘಟನೆಗೆ ಸೇರಿದ ಸಾವರ್ಕರ್‌ರ ಕೆಲವು ಅನುಯಾಯಿಗಳ ಬೆಂಬಲವಿತ್ತು’’ ಎಂಬುದಾಗಿಯೂ ನಗರವಾಲಾ ತನ್ನ ವರದಿಯಲ್ಲಿ ದಾಖಲಿಸಿದ್ದಾರೆ. ಹಿಂದೂ ರಾಷ್ಟ್ರದಳ ಎಂಬ ಹೆಸರಿನ ಈ ಸಂಘಟನೆಯು ಹಿಂದೂಗಳನ್ನು ಮಿಲಿಟರೀಕರಿಸುವ ಸಾವರ್ಕರ್ ಅವರ ಸಿದ್ಧಾಂತದಿಂದ ಪ್ರಭಾವಿತವಾಗಿತ್ತು. ಗೋಡ್ಸೆ ಹಾಗೂ ಇತರ ಸಂಚುಗಾರರು ಹಿಂದೂ ರಾಷ್ಟ್ರದಳದ ಭಾಗವಾಗಿದ್ದರು ಎಂಬುದನ್ನು ಸಾವರ್ಕರ್ ಅವರು ನ್ಯಾಯಾಲಯದ ಮುಂದೆ ನೀಡಿದ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದರು. ‘‘ಹಿಂದೂ ಸಂಘಟನಾ ಚಳವಳಿಯ ದೈನಂದಿನ ಕಾರ್ಯಕ್ರಮಗಳನ್ನು ಕೈಗೊಳ್ಳಲು ಹಲವಾರು ಹಿಂದೂ ಸ್ವಯಂಸೇವಕ ಸಂಘಗಳಿದ್ದು, ಅವುಗಳಲ್ಲಿ ಹಿಂದೂ ರಾಷ್ಟ್ರ ದಳವೂ ಒಂದು’’ ಎಂದು ಅವರು ಹೇಳಿದ್ದರು. ಹಿಂದೂ ರಾಷ್ಟ್ರ ದಳದ ಬಗ್ಗೆ ಕೇವಲ ಸಹಾನುಭೂತಿಯನ್ನಷ್ಟೇ ತಾನು ಹೊಂದಿರುವುದಾಗಿ ಅವರು ಹೇಳಿದ್ದರು.

ಹತ್ಯೆಯಲ್ಲಿ ಸಾವರ್ಕರ್ ಅವರ ಪಾತ್ರ

 ಗಾಂಧೀಜಿ ಹತ್ಯೆಗೆ ಮೊದಲ ಪ್ರಯತ್ನ 1948ರ ಜನವರಿ 20ರಂದು ನಡೆದಿತ್ತು. ಪಂಜಾಬಿ ನಿರಾಶ್ರಿತ ಮದನ್‌ಲಾಲ್ ಪಹ್ವಾ, ಹೊಸದಿಲ್ಲಿಯ ಬಿರ್ಲಾಹೌಸ್‌ನಲ್ಲಿ ನಡೆದ ಗಾಂಧೀಜಿಯ ಪ್ರಾರ್ಥನಾಸಭೆಯಲ್ಲಿ ಗನ್ ಕಾಟನ್ ಸ್ಲಾಬ್ ಎಂಬ ಒಂದು ಬಗೆಯ ಸ್ಫೋಟಕವನ್ನು ಸ್ಫೋಟಿಸಿದ್ದ. ಆತನನ್ನು ತಕ್ಷಣವೇ ಬಂಧಿಸಲಾಗಿತ್ತು. ಮದನ್‌ಲಾಲ್‌ನ ಪರಿಚಯವಿದ್ದ ಬಾಂಬೆ ನಗರದ ರುಯಿಯಾ ಕಾಲೇಜ್‌ನ ಅಧ್ಯಾಪಕ ಡಾ. ಜಗದೀಶ್ ಚಂದ್ರ ಎಂಬವರು ಮಾರನೇ ದಿನ ಸಂಜೆ 4:00 ಗಂಟೆಗೆ ಬಾಂಬೆ ಸಂಸ್ಥಾನದ ಮುಖ್ಯಮಂತ್ರಿ ಬಿ.ಜಿ.ಖೇರ್‌ಗೆ ಕರೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಖೇರ್ ಅವರು ಗೃಹ ಸಚಿವ ಮೊರಾರ್ಜಿ ದೇಸಾಯಿಯವರನ್ನು ಕರೆಸಿಕೊಂಡಿದ್ದರು. ‘‘ನಾನು ಅವರ ಕೊಠಡಿಗೆ ಹೋಗಿದ್ದೆ. ಅಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ಪ್ರೊ.ಜೈನ್ ಎಂಬುದಾಗಿ ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರಿದ್ದರು... ಸ್ಫೋಟದ ಘಟನೆಯ ಕುರಿತು ಪತ್ರಿಕೆಗಳಲ್ಲಿ ತಾನು ಓದಿದ್ದಾಗಿ ಅವರು ನಮಗೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಾದ ವ್ಯಕ್ತಿಯ ಬಗ್ಗೆ ತನಗೆ ವೈಯಕ್ತಿಕವಾದ ಅರಿವು ಇರುವುದಾಗಿ ಅವರು ಹೇಳಿದ್ದರು. ಆತನಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ನಮ್ಮಿಂದಿಗೆ ವಿವರಿಸಲು ಅವರು ಬಯಸಿದ್ದರು’’ ಎಂದು ಮೊರಾರ್ಜಿ ದೇಸಾಯಿ ತಾನು ನೀಡಿದ ಸಾಕ್ಷಿ ಹೇಳಿಕೆಯಲ್ಲಿ ತಿಳಿಸಿದ್ದರು.

ಮೊರಾರ್ಜಿಯವರ ಪ್ರಕಾರ ಜೈನ್‌ಗೆ ಈ ಸಂಚಿನ ಅರಿವಿತ್ತು. ‘‘ತಾನು ಮತ್ತು ತನ್ನ ಗೆಳೆಯರು ಮಹಾನ್ ನಾಯಕನೊಬ್ಬನ ಹತ್ಯೆ ಮಾಡಲು ನಿರ್ಧರಿಸಿರುವುದಾಗಿ ಮದನ್‌ಲಾಲ್ ನನಗೆ ತಿಳಿಸಿದ್ದನೆಂದು ಆತ (ಜೈನ್) ನನ್ನೊಂದಿಗೆ ಹೇಳಿದರು. ಮದನ್‌ಲಾಲ್ ಆನಂತರ ಮಹಾತ್ಮಾಗಾಂಧಿಯ ಹೆಸರನ್ನು ಹೇಳಿದ್ದ...ಅಹ್ಮದ್‌ನಗರದಲ್ಲಿ ತನ್ನ ಸ್ನೇಹಿತನೊಬ್ಬ ತಮ್ಮ ಜೊತೆ ಕೆಲಸ ಮಾಡಿರುವುದಾಗಿಯೂ ಮದನ್‌ಲಾಲ್ ತನ್ನೊಂದಿಗೆ ಹೇಳಿದ್ದಾಗಿಯೂ, ಆತನ ಹೆಸರು ಕರ್ಕರೆ ಎಂಬುದಾಗಿ ತಿಳಿಸಿದ್ದನೆಂದು ಡಾ.ಜೈನ್ ಮಾಹಿತಿ ನೀಡಿದರು. ಕರ್ಕರೆಯು ತನ್ನನ್ನು ಸಾವರ್ಕರ್ ಅವರ ಬಳಿಗೆ ಕೊಂಡೊಯ್ದಿದ್ದಾಗಿಯೂ ಮದನ್‌ಲಾಲ್ ತನಗೆ ತಿಳಿಸಿದ್ದನು ಎಂದು ಜೈನ್ ವಿವರಿಸಿದ್ದರು. ಸಾವರ್ಕರ್ ತನ್ನೊಂದಿಗೆ ಸುಮಾರು ಎರಡು ತಾಸುಗಳ ಕಾಲ ಮಾತನಾಡಿದರು ಮತ್ತು ತಾನು ಮಾಡುತ್ತಿರುವ ಕೆಲಸವನ್ನು ಪ್ರಶಂಸಿಸಿದರು. ತನ್ನ ಬೆನ್ನುತಟ್ಟಿದರು ಹಾಗೂ ಕೆಲಸ ಮುಂದುವರಿಸುವಂತೆ ತಿಳಿಸಿದರೆಂಬುದಾಗಿ ಮದನ್‌ಲಾಲ್ ತನ್ನೊಂದಿಗೆ ತಿಳಿಸಿದ್ದನು ಎಂದು ಜೈನ್ ಮಾಹಿತಿ ನೀಡಿದ್ದರು.’’

ಬಾಡ್ಗೆಯ ನಿರ್ಣಾಯಕ ಸಾಕ್ಷಿ

 ನಗರವಾಲಾ ಅವರ ತನಿಖೆಯು ದಿಗಂಬರ ರಾಮಚಂದ್ರ ಬಾಡ್ಗೆಯ ಬಂಧನಕ್ಕೆ ಕಾರಣವಾಯಿತು. ಗೋಡ್ಸೆ ಮತ್ತಿತರರಿಗೆ ‘ಗನ್‌ಕಾಟನ್ ಸ್ಲಾಬ್’ ಎಂಬ ಸ್ಫೋಟಕವನ್ನು ಬಾಡ್ಗೆ ಪೂರೈಕೆ ಮಾಡಿದ್ದ. ಅದನ್ನು ಮದನ್‌ಲಾಲ್ ಬಳಸಿಕೊಂಡಿದ್ದ. ವಿಚಾರಣೆಯ ವೇಳೆ ಬಾಡ್ಗೆ ಮಾಫಿ ಸಾಕ್ಷಿದಾರನಾದ ಹಾಗೂ ಪ್ರಾಸಿಕ್ಯೂಶನ್‌ನ ಮುಖ್ಯ ಸಾಕ್ಷಿಯಾದ. ಹತ್ಯೆ ಸಂಚಿನಲ್ಲಿ ಸಾವರ್ಕರ್ ಅವರು ಶಾಮೀಲಾಗಿರುವ ಬಗ್ಗೆ ಕೆಲವೊಂದು ಆತಂಕಕಾರಿ ವಿಷಯಗಳನ್ನು ಆತ ನ್ಯಾಯಾಲಯಕ್ಕೆ ತಿಳಿಸಿದ್ದ.

ಹಿಂದೂ ಮಹಾಸಭಾದ ಕಾರ್ಯಕರ್ತನಾದ ಬಾಡ್ಗೆ ಸಣ್ಣ ಶಸ್ತ್ರಾಸ್ತ್ರಗಳ ವ್ಯಾಪಾರ ನಡೆಸುತ್ತಿದ್ದ. ಜನವರಿ 9ರಂದು ಅಪ್ಟೆ ಹಾಗೂ ಬಾಡ್ಗೆ ಗನ್‌ಕಾಟನ್ ಸ್ಲಾಬ್‌ಗಳು, ಹ್ಯಾಂಡ್‌ಗ್ರೆನೇಡ್‌ಗಳು ಹಾಗೂ ಪಿಸ್ತೂಲ್‌ಗಳಿಗಾಗಿ ಬಾಡ್ಗೆಯನ್ನು ಮದನ್‌ಲಾಲ್ ಹಾಗೂ ಅಪ್ಟೆ ಸಂಪರ್ಕಿಸಿದ್ದ. ಮಾರನೇ ದಿನ ಬೆಳಗ್ಗೆ ಅಪ್ಟೆ, ಗೋಡ್ಸೆಯನ್ನು ಭೇಟಿ ಮಾಡಿಸಲು ಬಾಡ್ಗೆಯನ್ನು ಹಿಂದೂ ರಾಷ್ಟ್ರ ದಳದ ಕಾರ್ಯಾಲಯಕ್ಕೆ ಕೊಂಡೊಯ್ದಿದ್ದ. ಎರಡು ಗನ್‌ಕಾಟನ್ ಸ್ಲಾಬ್‌ಗಳು, ಐದು ಹ್ಯಾಂಡ್‌ಗ್ರೆನೇಡ್‌ಗಳು ಹಾಗೂ ಎರಡು ರಿವಾಲ್ವರ್‌ಗಳಿಗಾಗಿ ಆರ್ಡರ್ ಮಾಡಲಾಯಿತು. ಸ್ಫೋಟಕಗಳನ್ನು ಬಾಂಬೆಗೆ ರವಾನಿಸಬೇಕೆಂಬ ಶರತ್ತಿನೊಂದಿಗೆ, ಎಷ್ಟು ಮೊತ್ತ ಬೇಕಾದರೂ ನೀಡುವುದಾಗಿ ಬಾಡ್ಗೆಗೆ ಭರವಸೆ ನೀಡಲಾಯಿತು. ದಾದರ್‌ನಲ್ಲಿರುವ ಹಿಂದೂ ಮಹಾಸಭಾ ಕಚೇರಿಯಲ್ಲಿ ಜನವರಿ 14ರಂದು ಈ ಸ್ಫೋಟಕ, ಶಸ್ತ್ರಾಸ್ತ್ರಗಳು ಪೂರೈಕೆಯಾಗಬೇಕೆಂದು ಬಾಡ್ಗೆ ಬಯಸಿದ್ದ ಹಂತಕರ ಉದ್ದೇಶದ ಬಗ್ಗೆಯೂ ಬಾಡ್ಗೆ ಪೊಲೀಸರಿಗೆ ತಿಳಿಸಿದ್ದ. ‘‘ದಿಲ್ಲಿಗೆ ತಮ್ಮೆಂದಿಗೆ ಬರಲು ಇಚ್ಛಿಸುತ್ತೀರಾ ಎಂದು ಅಪ್ಟೆ ನನ್ನಲ್ಲಿ ಕೇಳಿದ್ದ. ಯಾವ ಉದ್ದೇಶಕ್ಕಾಗಿ ನಾನು ಅಲ್ಲಿಗೆ ಬರಬೇಕೆಂದು ಪ್ರಶ್ನಿಸಿದ್ದೆ. ಅದಕ್ಕೆ ಅಪ್ಟೆಯು, ‘ತಾತ್ಯಾರಾವ್’(ಸಾವರ್ಕರ್) ಅವರು ಗಾಂಧೀಜಿ, ಜವಾಹರಲಾಲ್ ನೆಹರೂ ಹಾಗೂ ಸುಹ್ರಾವರ್ಧಿ ಅವರನ್ನು ಮುಗಿಸಿಬಿಡಲು ನಿರ್ಧರಿಸಿದ್ದಾರೆ ಹಾಗೂ ಈ ಕೆಲಸವನ್ನು ತಮಗೆ ವಹಿಸಲಾಗಿದೆ ಎಂದು ತಿಳಿಸಿದ್ದ’’ ಎಂಬುದಾಗಿ ಬಾಡ್ಗೆ ಪೊಲೀಸರಿಗೆ ಬಹಿರಂಗಪಡಿಸಿದ್ದ.

ಬಾಡ್ಗೆ ಜನವರಿ 17ರಂದು ಸಾವರ್ಕರ್ ಭವನಕ್ಕೆ ಭೇಟಿ ನೀಡಿದ್ದ. ‘‘ಆಗ ಗೋಡ್ಸೆಯು ‘ನಾವೆಲ್ಲರೂ ಹೊರ ಹೋಗಿ ತಾತ್ಯಾರಾವ್ ಅವರನ್ನು ಕೊನೆಯ ಬಾರಿಗೆ ಕಾಣಬೇಕು’ ಎಂದು ಹೇಳಿದ. ಅಪ್ಟೆ, ಗೋಡ್ಸೆ, ಶಂಕರ್ ಹಾಗೂ ನಾನು ಟ್ಯಾಕ್ಸಿ ಹತ್ತಿ, ಶಿವಾಜಿ ಪಾರ್ಕ್‌ನಲ್ಲಿರುವ ಶಂಕರ್‌ಸದನಕ್ಕೆ ತೆರಳಿದೆವು. ಟ್ಯಾಕ್ಸಿಯನ್ನು ರಸ್ತೆಯ ಜಂಕ್ಷನ್ ಹಾಗೂ ಶಂಕರ ಸದನಕ್ಕೆ ಹೋಗುವ ಬೀದಿಯ ಬಳಿ ನಿಲ್ಲಿಸಲಾಯಿತು. ನಾವೆಲ್ಲರೂ ಕಾರಿನಿಂದ ಇಳಿದು ಜಂಕ್ಷನ್‌ನಿಂದ ಎರಡನೇ ಕಟ್ಟಡದಲ್ಲಿರುವ ಸಾವರ್ಕರ್ ಸದನಕ್ಕೆ ತೆರಳಿದೆವು.’’

   ಹತ್ತು ನಿಮಿಷಗಳ ಬಳಿಕ ಇಬ್ಬರೂ ಮೆಟ್ಟಲುಗಳಿಂದ ಇಳಿಯತೊಡಗಿದರು. ಸಾವರ್ಕರ್ ಅವರ ಹಿಂದೆಯೇ ಬಂದರು ಹಾಗೂ ‘ಯಶಸ್ವಿ ಹೋ ಹುವಾ (ಯಶಸ್ವಿಯಾಗಿರಿ ಮತ್ತು ವಾಪಸಾಗಿ)’ ಎಂದರು. ಸಾವರ್ಕರ್ ಅವರಲ್ಲಿಂದ ಮರಳುವಾಗ ಅಪ್ಟೆಯು ಬಾಡ್ಗೆಗೆ, ‘ಗಾಂಧೀಜಿಯ 100 ವರ್ಷಗಳು ಪೂರ್ಣಗೊಂಡಿವೆ ಎಂದು ತಾತ್ಯಾರಾವ್ ಭವಿಷ್ಯ ನುಡಿದಿದ್ದಾರೆ...’ ಎಂದನು. ಅಪ್ಟೆಯ ಈ ಹೇಳಿಕೆಯು, ತಾತ್ಯಾರಾವ್(ಸಾವರ್ಕರ್)ರಿಂದ ನಾನು ಕೇಳಿದ ಮಾತುಗಳು, ಏನು ನಡೆಯಿತೋ ಅದಕ್ಕೆ ಸಾವರ್ಕರ್ ಅವರ ಅನುಮೋದನೆ ಹಾಗೂ ಆಶೀರ್ವಾದವಿತ್ತೆಂಬ ನನ್ನ ನಂಬಿಕೆಯನ್ನು ದೃಢಪಡಿಸಿದೆ’’ ಎಂದು ಬಾಡ್ಗೆ ತನ್ನ ಸಾಕ್ಷದಲ್ಲಿ ತಿಳಿಸಿದ್ದಾನೆ. ಗೋಡ್ಸೆ ಹಾಗೂ ಅಪ್ಟೆ ದಿಲ್ಲಿಗೆ ಪ್ರಯಾಣಿಸಿದರು. ಬಾಡ್ಗೆ ಮತ್ತು ಶಂಕರ್ ಹಾಗೂ ಆತನ ಸಹಾಯಕ ಜನವರಿ 19ರಂದು ದಿಲ್ಲಿ ತಲುಪಿದರು ಹಾಗೂ ಹಿಂದೂ ಮಹಾಸಭಾದ ಕಾರ್ಯಾಲಯವನ್ನು ತಲುಪಿದರು. ಅಲ್ಲಿ ಅವರು ಗೋಪಾಲ್ ಗೋಡ್ಸೆ, ಕರ್ಕರೆ ಹಾಗೂ ಮದನ್‌ಲಾಲ್ ಅವರನ್ನು ಭೇಟಿಯಾದರು.

 ಗನ್‌ಕಾಟನ್ ಸ್ಲಾಬ್‌ಗೆ ಬೆಂಕಿ ಹಚ್ಚಿ ಗೊಂದಲ ಸೃಷ್ಟಿಸುವುದು ಹಾಗೂ ಆನಂತರ ಗ್ರೆನೇಡ್‌ಗಳನ್ನು ಎಸೆಯುವ ಸಂಚನ್ನು ರೂಪಿಸಲಾಗಿತ್ತು. ಮದನ್‌ಲಾಲ್ ಗನ್‌ಕಾಟನ್ ಸ್ಲಾಬ್‌ಗೆ ಬೆಂಕಿ ಹಚ್ಚಿದನು. ಆದರೆ ಬಾಡ್ಗೆ ಮತ್ತು ಆತನ ಸ್ನೇಹಿತರು ಗ್ರೆನೇಡ್‌ಗಳನ್ನು ಎಸೆಯಲು ವಿಫಲರಾದರು. ಗೋಡ್ಸೆ ಹಾಗೂ ಅಪ್ಟೆಗೆ, ಬಹುತೇಕವಾಗಿ ಅಪರಿಚಿತರಾದ ವ್ಯಕ್ತಿಗಳಿಂದ ಈ ಕೆಲಸವನ್ನು ಮಾಡಿಸಲು ಬಯಸಿದ್ದರು. ಆದರೆ ಆ ಪ್ರಯತ್ನ ವಿಫಲಗೊಂಡಿದ್ದರಿಂದ ಗೋಡ್ಸೆ ಹಾಗೂ ಅಪ್ಟೆ ಆ ಕೆಲಸಕ್ಕೆ ಮುಂದಾದರು.

ಸಾವರ್ಕರ್ ಯಾಕೆ ದೋಷಮುಕ್ತಗೊಂಡರು

 ವಿಚಾರಣಾ ನ್ಯಾಯಾಧೀಶ ಆತ್ಮಚರಣ್ ಮೊದಲ ಆರೋಪಪಟ್ಟಿ ಯಲ್ಲಿ ಸಾವರ್ಕರ್ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಅವರು ಗಾಂಧೀಜಿಯ ಹತ್ಯೆಯ ಸಂಚು ಹೂಡಿದ್ದರೆಂಬ ದೋಷಾರೋಪ ಹೊರಿಸಿದ್ದರು. ಕುತೂಹಲಕರವೆಂದರೆ ಸಾವರ್ಕರ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಆ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದ್ದರು. ಬಾಡ್ಗೆ ನೀಡಿದ ಸಾಕ್ಷವನ್ನು ದೃಢಪಡಿಸುವ ಯಾವುದೇ ಸಮರ್ಥನೀಯವಾದ ಪುರಾವೆಯಿಲ್ಲದಿರುವುದರಿಂದ ಸಾವರ್ಕರ್ ಅವರನ್ನು ದೋಷಮುಕ್ತಗೊಳಿಸಿರುವುದಾಗಿ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದರು.

 ಆದಾಗ್ಯೂ ಬಾಡ್ಗೆಯು ಓರ್ವ ವಿಶ್ವಸನೀಯ ಸಾಕ್ಷಿದಾರನೆಂದು ವಿಚಾರಣಾ ನ್ಯಾಯಾಧೀಶರು ಕಂಡುಕೊಂಡರು. 1948ರ ಜುಲೈ 20ರಿಂದ 30ರವರೆಗೆ ಬಾಡ್ಗೆಯನ್ನು ಪ್ರಶ್ನಿಸಲಾಗಿತ್ತು ಹಾಗೂ ಆತನನ್ನು ಪಾಟಿ ಸವಾಲಿಗೊಳಪಡಿಸಲಾಗಿತ್ತು. ‘‘ಆತ ನೇರ ಹಾಗೂ ಮುಚ್ಚುಮರೆಯಿಲ್ಲದಂತೆ ತನ್ನದೇ ಆದ ರೀತಿಯಲ್ಲಿ ವಾಸ್ತವಾಂಶಗಳನ್ನು ತಿಳಿಸಿದ್ದಾನೆ. ಆತ ಯಾವುದೇ ಪಾಟಿ ಸವಾಲನ್ನು ತಪ್ಪಿಸಿಕೊಳ್ಳಲಿಲ್ಲ ಅಥವಾ ಯಾವುದೇ ಪ್ರಶ್ನೆಯಿಂದ ನುಣುಚಿಕೊಳ್ಳುವ ಅಥವಾ ಬೇಲಿಮೇಲೆ ಕುಳಿತುಕೊಂಡ ಹಾಗೆ ಉತ್ತರಿಸಲಿಲ್ಲ’’ ಎಂದು ನ್ಯಾಯಾಧೀಶರು ತಿಳಿಸಿದರು. ಆದರೆ ಅದರ ಹೊರತಾಗಿಯೂ ನ್ಯಾಯಾಧೀಶ ಆತ್ಮಚರಣ್ ಅವರು ಸಾವರ್ಕರ್‌ರನ್ನು ದೋಷಿಯೆಂದು ಘೋಷಿಸಲಿಲ್ಲ. ಯಾಕೆಂದರೆ ಇಡೀ ಪ್ರಾಸಿಕ್ಯೂಶನ್ ಪ್ರಕರಣವು ಕೇವಲ ಬಾಡ್ಗೆ ನೀಡಿದ ಸಾಕ್ಷವನ್ನು ಆಧರಿಸಿತ್ತು.

ಸಂಚುಕೋರರು ಸಾವರ್ಕರ್ ಸದನಕ್ಕೆ ಹೋಗಿದ್ದರೆಂಬುದು ದೃಢಪಟ್ಟಿದೆ. ಚಿತ್ರ ನಟಿ ಶಾಂತಾಬಾಯಿ ಮೋದಕ್ ನೀಡಿದ ಹೇಳಿಕೆಯಲ್ಲಿ, ತಾನು ಗೋಡ್ಸೆ ಹಾಗೂ ಅಪ್ಟೆ ಅವರನ್ನು ಪೂನಾ ಎಕ್ಸ್ ಪ್ರೆಸ್‌ನಲ್ಲಿ ಭೇಟಿಯಾಗಿದ್ದಾಗಿಯೂ, ಅವರನ್ನು ಸಾವರ್ಕರ್ ಸದನದ ಬಳಿ ಜನವರಿ 14ರಂದು ಬಿಟ್ಟುಹೋಗಿದ್ದಾಗಿಯೂ ತಿಳಿಸಿದ್ದರು. ಹಾಗೆಯೇ ಟ್ಯಾಕ್ಸಿ ಚಾಲಕ ಐತಪ್ಪ ಕೋಟ್ಯಾನ್ ನ್ಯಾಯಾಲಯದ ಮುಂದೆ ನೀಡಿದ ಹೇಳಿಕೆಯಲ್ಲಿ ಜನವರಿ 17ರಂದು ಗೋಡ್ಸೆ ಹಾಗೂ ಅಪ್ಟೆ ಸಾವರ್ಕರ್‌ರ ಮನೆ ಸಮೀಪದ ಶಿವಾಜಿ ಪಾರ್ಕ್ ಬಳಿ ತನ್ನ ಟ್ಯಾಕ್ಸಿಯಿಂದ ಇಳಿದಿದ್ದರು ಎಂದು ಸಾಕ್ಷ ನುಡಿದಿದ್ದರು.

 ಮಿಸ್ ಮೋದಕ್ ನೀಡಿದ ಸಾಕ್ಷಿಯನ್ನು ಇಬ್ಬರು ಬಂಧಿತರು ನೀಡಿದ ಹೇಳಿಕೆಗಳು ಸಮರ್ಥಿಸಿತ್ತು ಹಾಗೂ ಬಾಡ್ಗೆಯ ಹೇಳಿಕೆಯು ಕೂಡಾ ಅದಕ್ಕೆ ಪೂರಕವಾಗಿತ್ತು ಎಂದು �

Writer - ರಾಜೇಶ್ ರಾಮಚಂದ್ರನ್

contributor

Editor - ರಾಜೇಶ್ ರಾಮಚಂದ್ರನ್

contributor

Similar News

ಜಗದಗಲ
ಜಗ ದಗಲ