ನಾಲ್ವರು ಕಾಶ್ಮೀರ ರಾಜಕಾರಣಿಗಳ ಬಂಧಮುಕ್ತಿ

Update: 2020-02-02 17:40 GMT

ಶ್ರೀನಗರ, ಫೆ.2: ನಾಲ್ವರು ಕಾಶ್ಮೀರಿ ರಾಜಕೀಯ ನಾಯಕರನ್ನು ಜಮ್ಮುಕಾಶ್ಮೀರ ಆಡಳಿತವು ರವಿವಾರ ಬಂಧಮುಕ್ತಗೊಳಿಸಿದೆ. ಕೇಂದ್ರ ಸರಕಾರವು ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದಾಗಿನಿಂದ ಇವರನ್ನು ಶ್ರೀನಗರಲ್ಲಿರುವ ಶಾಸಕರ ಹಾಸ್ಟೆಲ್‌ನಲ್ಲಿ ಬಂಧನದಲ್ಲಿರಿಸಲಾಗಿತ್ತು.

ಬಿಡುಗಡೆಗೊಂಡವರನ್ನು ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ನಾಯಕರಾದ ಅಬ್ದುಲ್ ಮಜೀದ್ ಲಾರ್ಮಿ, ಗುಲಾಂ ನಬಿ ಭಟ್ಟ್, ಮುಹಮ್ಮದ್ ಶಫಿ ಹಾಗೂ ಮುಹಮ್ಮದ್ ಯೂಸುಫ್ ಭಟ್ ಎಂದು ಗುರುತಿಸಲಾಗಿದೆ.

ಆದಾಗ್ಯೂ, ಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳ 17 ಮಂದಿ ನಾಯಕರು ಇನ್ನೂ ಕೂಡಾ ಶಾಸಕರ ಹಾಸ್ಟೆಲ್‌ನಲ್ಲಿ ಬಂಧನದಲ್ಲಿದ್ದಾರೆಂದು ತಿಳಿದುಬಂದಿದೆ. ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ, ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಅವರ ಬಂಧನದ ಅವಧಿಯನ್ನ್ನು ಡಿಸೆಂಬರ್ 15ರಂದು ಇನ್ನೂ ಮೂರು ತಿಂಗಳುಗಳ ಅವಧಿಗೆ ವಿಸ್ತರಿಸಲಾಗಿದೆ. ಅವರ ಪುತ್ರ ಉಮರ್ ಅಬ್ದುಲ್ಲಾ ಹಾಗೂ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಶ್ರೀನಗರದ ಗುಪ್ಕಾರ್ ರೋಡ್‌ನಲ್ಲಿರುವ ಅವರ ನಿವಾಸದಲ್ಲಿ ಗೃಹಬಂಧನದಲ್ಲಿರಿಸಲಾಗಿದೆ.

 ಇನ್ನೊಬ್ಬ ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯನ್ನು ಆರಂಭದಲ್ಲಿ ಶ್ರೀನಗರದ ಚೇಶ್‌ಮಶಾಹಿ ಹಟ್‌ನಲ್ಲಿ ಇರಿಸಲಾಗಿತ್ತಾದರೂ, ಆನಂತರ ಅವರನ್ನು ಅವರು ಸರಕಾರಿ ವಸತಿಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಜಮ್ಮುಕಾಶ್ಮೀರದಲ್ಲಿ ಗೃಹಬಂಧನದಲ್ಲಿರುವ ರಾಜಕೀಯ ನಾಯಕರ ನಿಖರ ಸಂಖ್ಯೆ ಇನ್ನೂ ಸ್ಪಷ್ಟವಾಗಿ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ.

ಜನವರಿ 16ರಂದು ಇನ್ನೂ ಐವರು ಕಾಶ್ಮೀರಿ ರಾಜಕೀ ನಾಯಕರನ್ನು ಬಂಧನದಿಂದ ಬಿಡುಗಡೆಗೊಳಿಸಲಾಗಿತ್ತು ಆದಕ್ಕೂ ಮುನ್ನ ಶಾಸಕರ ವಸತಿಗೃಹದಲ್ಲಿ ಬಂಧನದಲ್ಲಿದ್ದ ಇಬ್ಬರು ಶಾಸಕರು ಸೇರಿದಂತೆ ಇತರ ಐವರು ರಾಜಕಾರಣಿಗಳನ್ನು ಡಿಸೆಂಬರ್ 30ರಂದು ಬಿಡುಗಡೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News