ಇರಾಕ್ ನೂತನ ಪ್ರಧಾನಿಗೆ ಬೆಂಬಲ ಘೋಷಿಸಿದ ಇರಾನ್

Update: 2020-02-03 17:22 GMT

ಟೆಹರಾನ್ (ಇರಾನ್), ಫೆ. 3: ಇರಾಕ್‌ನ ನೂತನ ಪ್ರಧಾನಿ ಮುಹಮ್ಮದ್ ತೌಫೀಕ್ ಅಲ್ಲಾವಿಗೆ ಇರಾನ್ ರವಿವಾರ ತನ್ನ ಸಂಪೂರ್ಣ ಬೆಂಬಲ ಘೋಷಿಸಿದೆ ಹಾಗೂ ಅಮೆರಿಕ ಪಡೆಗಳು ಇರಾಕ್ ತೊರೆಯಬೇಕು ಎಂಬ ಅಲ್ಲಿನ ಸರಕಾರದ ಬೇಡಿಕೆಗೆ ತನ್ನ ಬೆಂಬಲವಿದೆ ಎಂದು ಹೇಳಿದೆ.

‘‘ಇರಾಕ್‌ನ ಸ್ವಾತಂತ್ರ, ರಾಷ್ಟ್ರೀಯ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಮತ್ತು ಪ್ರಜಾಪ್ರಭುತ್ವ ಬುನಾದಿಯನ್ನು ಭದ್ರಪಡಿಸಲು ಇರಾನ್ ನೀಡುತ್ತಿರುವ ಬೆಂಬಲ ಮುಂದುವರಿಯಲಿದೆ. ಜೊತೆಗೆ ಇರಾಕ್ ನೆಲದಿಂದ ಅಮೆರಿಕದ ಪಡೆಗಳು ಹೊರಹೋಗಬೇಕೆನ್ನುವ ಇರಾಕ್ ಸರಕಾರ ಮತ್ತು ಜನರ ನ್ಯಾಯೋಚಿತ ಬೇಡಿಕೆಯನ್ನೂ ಇರಾನ್ ಬೆಂಬಲಿಸಲಿದೆ. ಇರಾಕ್‌ನ ನೂತನ ಪ್ರಧಾನಿಯಾಗಿ ಮುಹಮ್ಮದ್ ತೌಫೀಕ್ ಅಲ್ಲಾವಿಯ ಆಯ್ಕೆಯನ್ನು ಇರಾನ್ ಸ್ವಾಗತಿಸುತ್ತದೆ’’ ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರ ಅಬ್ಬಾಸ್ ವೌಸವಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News