ಲಂಡನ್‌ನಲ್ಲಿ ಶಂಕಿತ ಭಯೋತ್ಪಾದಕ ಘಟನೆ; ಇಬ್ಬರಿಗೆ ಚೂರಿ ಇರಿತ: ಪೊಲೀಸ್ ಗುಂಡಿಗೆ ಒಬ್ಬ ಸಾವು

Update: 2020-02-03 17:35 GMT

ಲಂಡನ್, ಫೆ. 3: ಶಂಕಿತ ‘ಭಯೋತ್ಪಾದನೆ ಸಂಬಂಧಿ’ ಘಟನೆಯೊಂದರಲ್ಲಿ ಕನಿಷ್ಠ ಇಬ್ಬರು ಚೂರಿ ಇರಿತಕ್ಕೆ ಒಳಗಾದ ಬಳಿಕ, ದಕ್ಷಿಣ ಲಂಡನ್‌ನಲ್ಲಿ ವ್ಯಕ್ತಿಯೊಬ್ಬನನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಬ್ರಿಟಿಶ್ ಪೊಲೀಸರು ರವಿವಾರ ತಿಳಿಸಿದ್ದಾರೆ.

 ‘‘ಸ್ಟ್ರೀತಮ್ ಹೈ ರೋಡ್‌ನಲ್ಲಿ ರವಿವಾರ ಅಪರಾಹ್ನ ಸುಮಾರು 2 ಗಂಟೆಗೆ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿದರು ಹಾಗೂ ಆತ ಬಳಿಕ ಮೃತಪಟ್ಟನು’’ ಎಂದು ಲಂಡನ್ ಮೆಟ್ರೊಪಾಲಿಟನ್ ಪೊಲೀಸ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘‘ವ್ಯಕ್ತಿಯ ಸಾವಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಘಟನೆಯನ್ನು ಭಯೋತ್ಪಾದನೆ ಸಂಬಂಧಿ ಎಂಬುದಾಗಿ ಘೋಷಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.

‘‘ಚೂರಿ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ’’ ಎಂದಿದ್ದಾರೆ.

‘‘ಚೂರಿಯನ್ನು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮಫ್ತಿಯಲ್ಲಿದ್ದ ಪೊಲೀಸ್ ಅಧಿಕಾರಿಯಂತೆ ಕಂಡುಬಂದ ವ್ಯಕ್ತಿಯೊಬ್ಬ ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ನಾನು ನೋಡಿದೆ. ಆ ವ್ಯಕ್ತಿಗೆ ಬಳಿಕ ಗುಂಡು ಹಾರಿಸಲಾಯಿತು’’ ಎಂದು ಪ್ರತ್ಯಕ್ಷದರ್ಶಿ ವಿದ್ಯಾರ್ಥಿಯೊಬ್ಬ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News