ಕಿವೀಸ್ ಸರಣಿಯಲ್ಲಿ ಮಿಂಚಿದ ರಾಹುಲ್; ಧೋನಿ, ಪಂತ್ ಸ್ಥಾನಕ್ಕೆ ಕುತ್ತು

Update: 2020-02-03 18:26 GMT

ವೆಲ್ಲಿಂಗ್ಟನ್, ಫೆ.3: ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ಪರಿಕಲ್ಪನೆಯನ್ನು ಹೇಗೆ ಗೌರವಿಸುತ್ತಾರೆ ಎಂಬುದನ್ನು ಆಗಾಗ್ಗೆ ಹೇಳುತ್ತಾರೆ. ಅದರ ಮಹತ್ವವನ್ನು ಶಾಸ್ತ್ರಿಗಿಂತ ಯಾರೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

 1985ರಲ್ಲಿ ಶಾಸ್ತ್ರಿ ಪ್ರಯೋಗದ ಭಾಗವಾಗಿದ್ದರು. 8 ನೇ ಸ್ಥಾನದಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಆಲ್‌ರೌಂಡರ್ ಆಸ್ಟ್ರೇಲಿಯದಲ್ಲಿ ನಡೆದ ವಿಶ್ವ ಸರಣಿಯಲ್ಲಿ ಆರಂಭಿಕ ಆಟಗಾರನಾಗಿ ಮಿಂಚಿದರು ಮತ್ತು ಭಾರತವು ಚಾಂಪಿಯನ್ ಆಫ್ ಚಾಂಪಿಯನ್ಸ್ ಆಗಿ ಹೊರಹೊಮ್ಮುವಲ್ಲಿ ಸಹಾಯ ಮಾಡಿದರು. ರಾಹುಲ್ ದ್ರಾವಿಡ್ ಅವರ ಶ್ರೇಷ್ಠತೆಯ ಬಗ್ಗೆ ಮಾತನಾಡುವಾಗ ಸೌರವ್ ಗಂಗುಲಿ ಅವರ ನಾಯಕತ್ವದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ದ್ರಾವಿಡ್ ವಹಿಸಿದ ಪಾತ್ರವನ್ನು ಮರೆಯುವುದು ಕಷ್ಟ.

ಮಹೇಂದ್ರ ಸಿಂಗ್ ಧೋನಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ದೀರ್ಘಾವಧಿಯ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ ನಂತರ ರಿಷಭ್ ಪಂತ್ ಅವರಿಗೆ ತಂಡದ ಬೆಂಬಲ ದೊರಕಿತು. ಆದರೆ ಪಂತ್ ನಿರೀಕ್ಷೆಗಳಿಗೆ ತಕ್ಕಂತೆ ಆಡುವಲ್ಲಿ ಹೆಣಗಾಡಿದರು.

ಭಾರತೀಯ ಕ್ರಿಕೆಟ್‌ನ ಭವಿಷ್ಯದ ವಿಕೆಟ್ ಕೀಪರ್ ಸ್ಥಾನವನ್ನು ತುಂಬಲು ಪಂತ್‌ಗೆ ಸಾಕಷ್ಟು ಅವಕಾಶ ನೀಡಲಾಯಿತು. ಆದರೆ 7ತಿಂಗಳಲ್ಲಿ ಪಂತ್ ಕಳಪೆ ರನ್ ಮತ್ತು ವಿಕೆಟ್ ಕೀಪಿಂಗ್ ಸಮಸ್ಯೆ ಬೇರೆ ವಿಕೆಟ್ ಕೀಪರ್ ಆಯ್ಕೆಗೆ ದಾರಿ ಮಾಡಿಕೊಟ್ಟಿತು. ಹಿಂದಿನ ಸಮಸ್ಯೆಗಳು ತಂಡದ ನಿರ್ವಹಣೆಯನ್ನು ಬೇರೆಡೆ ನೋಡುವಂತೆ ಮಾಡಿತು.

 ಸಂಜು ಸ್ಯಾಮ್ಸನ್ ಅವಕಾಶಕ್ಕಾಗಿ ಕಾಯುತ್ತಿದ್ದರೂ, ಅವರನ್ನು ಪ್ರಯೋಗಕ್ಕೆ ಇಳಿಸಲು ಮುಂದಾಗಲಿಲ್ಲ. ಹೀಗಾಗಿ ಡ್ರೆಸ್ಸಿಂಗ್ ಕೋಣೆಯಲ್ಲಿ ಅವರು ಉಳಿದರು. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯ ವಿರುದ್ಧದ ಸ್ವದೇಶದಲ್ಲಿ ನಡೆದ ಏಕದಿನ ಸರಣಿಯ ಸಂದರ್ಭದಲ್ಲಿ ಪಂತ್ ಗಾಯಗೊಂಡಾಗ ಲೋಕೇಶ್ ರಾಹುಲ್ ಅವರಿಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನೀಡಲಾಯಿತು. ನ್ಯೂಝಿಲ್ಯಾಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಟ್ವೆಂಟಿ-20 ಸರಣಿಯಲ್ಲಿ ಲೋಕೇಶ್ ರಾಹುಲ್ ಮಿಂಚುವ ಮೂಲಕ ವಿಕೆಟ್ ಕೀಪರ್ ಸ್ಥಾನವನ್ನು ಭರ್ತಿ ಮಾಡಿದ್ದಾರೆ.

  ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ರಾಹುಲ್ ಆಯ್ಕೆ ಸಮಿತಿಯು ತನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ನ್ಯೂಝಿಲ್ಯಾಂಡ್ ಸರಣಿಯಲ್ಲಿ 224 ರನ್ ಗಳಿಸಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  ಇದು ದ್ವಿಪಕ್ಷೀಯ ಟ್ವೆಂಟಿ-20 ಸರಣಿಯಲ್ಲಿ ಗಳಿಸಿದ ಗರಿಷ್ಠ ರನ್ ದಾಖಲೆಯಾಗಿದೆ. ರಾಹುಲ್ ಮಿಂಚಿನ ಸ್ಟಂಪಿಂಗ್, ಆತ್ಮವಿಶ್ವಾಸದಿಂದ ಕ್ಯಾಚ್ ತೆಗೆದುಕೊಂಡರು ಮತ್ತು ಡಿಆರ್‌ಎಸ್‌ನಲ್ಲಿ ನಾಯಕನಿಗೆ ಸಹಾಯ ಮಾಡಿದರು.

5ನೇ ಟ್ವೆಂಟಿ-20ಯಲ್ಲಿ ನ್ಯೂಝಿಲ್ಯಾಂಡ್ ಬೆನ್ನಟ್ಟುವಿಕೆಯ ಸಮಯದಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಟ್ಟಾಗ ರಾಹುಲ್ ಅಲ್ಲಿಯೂ ನಿರಾಶೆಗೊಳ್ಳಲಿಲ್ಲ. ಮಿಂಚಿದರು. ಹೆಚ್ಚುವರಿ ಜವಾಬ್ದಾರಿ ರಾಹುಲ್ ಅವರು ಮಾಡಿದ ಕೆಲಸದಲ್ಲಿ ಉತ್ತಮವಾಗುವಂತೆ ಮಾಡಿತು. 5 ಪಂದ್ಯಗಳ ಸರಣಿಯಲ್ಲಿ ಭಾರತವು ಅಂತಿಮ ಹನ್ನೊಂದರ ಬಳಗದಲ್ಲಿ ಇಬ್ಬರು ಆಲ್‌ರೌಂಡರ್‌ಗಳನ್ನು ಆಡಿಸಿತು. ತಂಡದಲ್ಲಿ ರಿಷಭ್ ಪಂತ್ ಇಲ್ಲದ ಕಾರಣ ಮನೀಷ್ ಪಾಂಡೆಗೆ ಫಿನಿಶರ್ ಪಾತ್ರವನ್ನು ನೀಡಲಾಯಿತು. ಪಾಂಡೆ ಇದರಲ್ಲಿ ಯಶಸ್ವಿಯಾದರು. ರಾಹುಲ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ಪಾತ್ರವನ್ನು ತಡವಾಗಿ ನಿರ್ವಹಿಸಿದ್ದಾರೆ. ಆದರೆ ಕರ್ನಾಟಕ ರಣಜಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ತಂಡದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಅವರು ವಿಕೆಟ್ ಕೀಪರ್ ಪಾತ್ರವನ್ನು ನಿರ್ವಹಿಸಿದ್ದಾರೆ.

 ಐಪಿಎಲ್ 2020ರ ನಂತರ ಎಂ.ಎಸ್.ಧೋನಿ ನಿವೃತ್ತಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ರವಿ ಶಾಸ್ತ್ರಿ ಮತ್ತು ಹಿರಿಯ ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News