ಗುರುದ್ವಾರಕ್ಕೇ ಬಂತು ಶಾಹೀನ್‍ ಬಾಗ್‍ ನಿಂದ ಆಹಾರದ ಲಂಗರ್!

Update: 2020-02-05 13:20 GMT
Photo: thewire.in(Prabhjit Singh)l

ಹೊಸದಿಲ್ಲಿ: ಮಂಗಳವಾರ ರಾತ್ರಿ 11ರ ವೇಳೆಗೆ ಶಾಹೀನ್‍ಬಾಗ್‍ನಲ್ಲಿ ಎಂದಿನಂತೆಯೇ ಲವಲವಿಕೆ ಇತ್ತು. 30 ಸೆಕೆಂಡ್‍ನಲ್ಲಿ ಸಿಎಎ ವಿರುದ್ಧದ ಪ್ರತಿಭಟನಾಕಾರರಿಂದ ಕಿಕ್ಕಿರಿದು ತುಂಬಿದ್ದ ಫುಡ್‍ಜಾಯಿಂಟ್‍ನಲ್ಲಿದ್ದ ನಮಗೆ ದೂರವಾಣಿ ಕರೆ ಬಂತು. "ನಮ್ಮ ಬಸ್ಸುಗಳನ್ನು ದೆಹಲಿ ಪೊಲೀಸರು ತಡೆ ಹಿಡಿದಿದ್ದಾರೆ. ಪಂಜಾಬ್‍ನಿಂದ ಶಾಹೀನ್‍ಬಾಗ್‍ಗೆ ಆಗಮಿಸಿದ ಸುಮಾರು 500 ಮಂದಿ ಇದ್ದೇವೆ. ಸಿತಾರಾ ವಿಹಾರ ಪೆಟ್ರೋಲ್ ಪಂಪ್ ಬ್ಯಾರಿಕೇಡ್ ಬಳಿ ನಾವಿದ್ದೇವೆ" ನಮ್ಮ ಸಂಭಾಷಣೆ ಕೇಳಿದ ಯುವಕನೊಬ್ಬ ಮತ್ತೊಬ್ಬರ ಜತೆ ಸೇರಿ ನನ್ನೊಂದಿಗೆ ಸಿತಾರಾ ವಿಹಾರಕ್ಕೆ ಬರಲು ಮುಂದಾದ. ಅಲ್ಲಿ ಎಂಟು ಬಸ್ಸುಗಳು ನಿಂತಿದ್ದವು ಹಾಗೂ ಎರಡು ಪೊಲೀಸ್ ವಾಹನಗಳು ಬೆಂಗಾವಲಿಗೆ ಸಿದ್ಧವಾಗಿದ್ದವು. ಯಮುನಾ ನದಿದಂಡೆಯಲ್ಲಿ ಶಾಹೀನ್ ಬಾಗ್‍ನಿಂದ 2 ಕಿಲೋಮೀಟರ್ ದೂರದ ಗುರುದ್ವಾರ ಬಾಳಾಸಾಹೇಬ್‍ಗೆ ಕರೆದೊಯ್ಯಲು ಸಜ್ಜಾಗಿದ್ದವು.

ಭಾರತೀಯ ಕಿಯಾನ್ ಯೂನಿಯನ್‍ನ ಮುಖಂಡ ಹರೀಂದರ್ ಬಿಂದು ಈ ಬಸ್ಸಿನಲ್ಲಿದ್ದರು. ತಮ್ಮ ಫೋನ್‍ಗೆ ಗೂಗಲ್ ಮ್ಯಾಪ್ ಹಾಕಿ ರಾತ್ರಿಗೆ ತಮ್ಮನ್ನು ಗುರುದ್ವಾರಕ್ಕೆ ಕರೆದೊಯ್ಯುತ್ತಿದ್ದಾರೆಯೇ ಅಥವಾ ಬಂಧಿಸಲು ಬೇರೆಡೆಗೆ ಕರೆದೊಯ್ಯುತ್ತಾರೆಯೇ ಎಂದು ಪರೀಕ್ಷಿಸಿದರು.
ಶಾಹೀನ್‍ಬಾಗ್ ಪ್ರತಿಭಟನಾ ಸ್ಥಳಕ್ಕೆ ಬಂದಾಗ ಘೋಷಣೆ ಮೊಳಗುತ್ತಿತ್ತು. "ದೆಹಲಿ ಪೊಲೀಸರು ಪಂಜಾಬ್‍ನಿಂದ ಬಂದ ನಮ್ಮ ಸಹೋದರರನ್ನು ಬಂಧಿಸಿದ್ದಾರೆ. ಇಲ್ಲಿಗೆ ಬರಲು ಬಿಡುತ್ತಿಲ್ಲ"

ಅಂತಿಮವಾಗಿ ಗುರುದ್ವಾರಕ್ಕೆ ಅವರು ಆಗಮಿಸಿದಾಗ 500 ಮಂದಿ ಹಸಿದಿದ್ದರು. ಆ ವೇಳೆಗೆ ಶಾಹೀನ್‍ಬಾಗ್‍ನಿಂದ ನಾವು ಅಲ್ಲಿಗೆ ತೆರಳಿ ಲಂಗರ್ ತರುವುದಾಗಿ ಭರವಸೆ ನೀಡಿದೆವು. ಗುರುದ್ವಾರದಲ್ಲಿ ನೂರಾರು ಮಂದಿ ಖಾಲಿ ಪ್ಲೇಟ್‍ನೊಂದಿಗೆ ಕಾಯುತ್ತಿದ್ದರು. ಮಧ್ಯರಾತ್ರಿ ವೇಳೆಗೆ ದೊಡ್ಡ ಸಂಖ್ಯೆಯ ಜನ ಬರುತ್ತಾರೆ ಎಂದು ಸೇವಾದಾರರು ಹೇಳಿದರು. ಆಗ ನಮ್ಮ ಕಾರ್ಯಕರ್ತರು, "ನಿಮಗಾಗಿ ವೆಜಿಟೇಬಲ್ ಬಿರಿಯಾನಿ ಸಿದ್ಧಪಡಿಸಲಾಗಿದೆ. ಭಯ ಬೇಡ" ಎಂದು ಭರವಸೆ ನೀಡಿದರು. ಹೀಗೆ ಸಿಖ್ ಸಹೋದರರಿಗಾಗಿ ಇಡೀ ಲಂಗರ್ ಗುರುದ್ವಾರಕ್ಕೆ ತರುವ ಮೂಲಕ ಪ್ರತಿಭಟನಾಕಾರರು ಬಾತೃತ್ವ ಮೆರೆದರು.

ಕೃಪೆ: thewire.in

Writer - ಪ್ರಭಜಿತ್ ಸಿಂಗ್ - thewire.in

contributor

Editor - ಪ್ರಭಜಿತ್ ಸಿಂಗ್ - thewire.in

contributor

Similar News