2021ರ ಕೊನೆಯಿಂದ ರಶ್ಯದ ಎಸ್-400 ಕ್ಷಿಪಣಿಗಳ ವಿತರಣೆ ಆರಂಭ: ವರದಿ

Update: 2020-02-05 16:25 GMT

ಮಾಸ್ಕೊ (ರಶ್ಯ), ಫೆ. 5: ರಶ್ಯವು ಭಾರತಕ್ಕೆ ಎಸ್-400 ಕ್ಷಿಪಣಿ ವ್ಯವಸ್ಥೆಗಳ ಪೂರೈಕೆಯನ್ನು 2021ರ ಕೊನೆ ಭಾಗದಿಂದ ಆರಂಭಿಸುತ್ತದೆ ಎಂದು ರಶ್ಯದ ಅಧಿಕಾರಿಗಳನ್ನು ಉಲ್ಲೇಖಿಸಿ ಆರ್‌ಐಎ ನೊವೊಸ್ಟಿ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.

ಭಾರತವು ಎಸ್-400 ಕ್ಷಿಪಣಿಗಳಿಗಾಗಿ 2018ರಲ್ಲಿ ರಶ್ಯದೊಂದಿಗೆ 5 ಬಿಲಿಯ ಡಾಲರ್ (ಸುಮಾರು 35,600 ಕೋಟಿ ರೂಪಾಯಿ) ಒಪ್ಪಂದ ಮಾಡಿಕೊಂಡಿತ್ತು.

 ‘‘ಗುತ್ತಿಗೆಯನ್ನು ವೇಳಾಪಟ್ಟಿಯಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಕ್ಷಿಪಣಿಗಳನ್ನು 2021 ಕೊನೆಯಲ್ಲಿ ವಿತರಿಸಲಾಗುವುದು’’ ಎಂದು ಕೇಂದ್ರ ಸೇನಾ ತಂತ್ರಜ್ಞಾನ ಸಹಕಾರ ಮಂಡಳಿಯ ಉಪನಿರ್ದೇಶಕ ವ್ಲಾದಿಮಿರ್ ಡ್ರೊಝ್‌ಶೊವ್ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯುತ್ತಿರುವ ‘ರಕ್ಷಣಾ ಪ್ರದರ್ಶನ 2020’ರಲ್ಲಿ ಹೇಳಿದ್ದಾರೆ ಎಂದು ಆರ್‌ಐಎ ವರದಿ ಮಾಡಿದೆ.

ಕ್ಷಿಪಣಿಗಳ ವಿತರಣೆಯು 2021ರ ಸೆಪ್ಟಂಬರ್‌ನಲ್ಲಿ ಆರಂಭವಾಗಲಿದೆ ಎಂಬುದಾಗಿ ಇದೇ ಸುದ್ದಿ ಸಂಸ್ಥೆಯು ನವೆಂಬರ್‌ನಲ್ಲಿ ರಶ್ಯ ಸರಕಾರದ ಶಸ್ತ್ರ ರಫ್ತು ಘಟಕ ‘ರೊಸೊಬೊರೊನ್‌ಎಕ್ಸ್‌ಪೋರ್ಟ್’ನ ಮಹಾನಿರ್ದೇಶಕ ಅಲೆಕ್ಸಾಂಡರ್ ಮಿಖೀವ್‌ರನ್ನು ಉಲ್ಲೇಖಿಸಿ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News