×
Ad

ವುಹಾನ್‌ನಿಂದ 78 ನಾಗರಿಕರನ್ನು ತೆರವುಗೊಳಿಸಿದ ರಶ್ಯ

Update: 2020-02-05 22:23 IST

ಮಾಸ್ಕೊ (ರಶ್ಯ), ಫೆ. 5: ಕೊರೋನವೈರಸ್ ಸೋಂಕಿನ ಕೇಂದ್ರ ಬಿಂದುವಾಗಿರುವ ಚೀನಾದ ವುಹಾನ್ ನಗರದಿಂದ ತನ್ನ 78 ನಾಗರಿಕರ ಮೊದಲ ಗುಂಪನ್ನು ರಶ್ಯ ಬುಧವಾರ ತೆರವುಗೊಳಿಸಿದೆ. ಪ್ರಯಾಣಿಕರನ್ನು ತಪಾಸಣೆಗಾಗಿ ಎರಡು ವಾರಗಳ ಕಾಲ ಸೈಬೀರಿಯದಲ್ಲಿರುವ ಶಿಬಿರವೊಂದರಲ್ಲಿ ಇರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಶ್ಯವು ಚೀನಾದೊಂದಿಗೆ 4,300 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಈ ಗಡಿಯ ಮುಖಾಂತರ ಎರಡು ದೇಶಗಳ ಜನರು ಸೀಮಿತವಾಗಿ ಇನ್ನೊಂದು ದೇಶಕ್ಕೆ ಹೋಗಬಹುದಾಗಿದೆ.

ರಶ್ಯದಲ್ಲಿ ಕಳೆದ ವಾರ ಎರಡು ಕೊರೋನವೈರಸ್ ಸೋಂಕು ಪ್ರಕರಣಗಳು ಖಚಿತಗೊಂಡಿವೆ. ಎರಡೂ ಪ್ರಕರಣಗಳು ಸೈಬೀರಿಯದಲ್ಲಿ ವರದಿಯಾಗಿವೆ ಹಾಗೂ ಎರಡೂ ಪ್ರಕರಣಗಳಲ್ಲಿ ರೋಗಿಗಳು ಚೀನಾ ಪ್ರಜೆಗಳು.

ರಶ್ಯದ ನಾಗರಿಕರ ಮೊದಲ ಗುಂಪು ಬುಧವಾರ ಮುಂಜಾನೆ ಟಯುಮೆನ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಪ್ರಯಾಣಿಕರ ಪೈಕಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಚೀನಾದಿಂದ ಒಟ್ಟು 144 ರಶ್ಯ ನಾಗರಿಕರನ್ನು ವಾಪಸ್ ಕರೆತರಲು ರಶ್ಯ ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News