ಅಂಡರ್-19 ವಿಶ್ವಕಪ್: ಫೈನಲ್‌ ನಲ್ಲಿ ಹಾಲಿ ಚಾಂಪಿಯನ್ ಭಾರತಕ್ಕೆ ಬಾಂಗ್ಲಾ ಎರುರಾಳಿ

Update: 2020-02-06 16:22 GMT

ಸೆನ್ವೆಸ್ ಪಾರ್ಕ್, ಫೆ.6: ನ್ಯೂಝಿಲ್ಯಾಂಡ್ ವಿರುದ್ಧದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ಜಯಗಳಿಸಿದ್ದು, ಅಂಡರ್-19 ವಿಶ್ವಕಪ್‌ ನ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಆದಿತ್ಯವಾರ ನಡೆಯುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತನ್ನು ಎದುರಿಸಲಿದೆ.

ಇಂದು ನಡೆದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲ್ಯಾಂಡ್ ತಂಡ 50 ಓವರ್ ಗಳಲ್ಲಿ 8 ವಿಕಟ್ ನಷ್ಟಕ್ಕೆ 211 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ಮುಹಮ್ಮದ್ ಹಸನ್ ಜೋಯ್ ಶತಕತ ನೆರವಿನಿಂದ 44.1 ಓವರ್ ಗಳಲ್ಲಿ ಗುರಿ ತಲುಪಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News