ರಫ್ತು ನಿಷೇಧದಿಂದ ಶಸ್ತ್ರಚಿಕಿತ್ಸೆ ಮಾಸ್ಕ್, ಕೈಗವಸಿಗೆ ವಿನಾಯಿತಿ

Update: 2020-02-09 18:07 GMT

ಹೊಸದಿಲ್ಲಿ, ಫೆ.9: ಶಸ್ತ್ರಚಿಕಿತ್ಸೆ ಸಂದರ್ಭ ಬಳಸುವ ಮಾಸ್ಕ್ (ಮುಖಗವಚ) ಹಾಗೂ ಕೈಗವಸು(ಗ್ಲೋವ್)ಗೆ ರಫ್ತು ನಿಷೇಧ ಪಟ್ಟಿಯಿಂದ ವಿನಾಯಿತಿ ನೀಡಿರುವುದಾಗಿ ಸರಕಾರದ ಅಧಿಸೂಚನೆ ತಿಳಿಸಿದೆ.

ಚೀನಾದಲ್ಲಿ ಮಾರಣಾಂತಿಕ ಕೊರೋನ ವೈರಸ್ ಕಾಯಿಲೆಯ ಆತಂಕದ ನಡುವೆಯೇ, ಗಾಳಿಯಿಂದ ಹರಡುವ ವೈರಸ್‌ಗಳಿಂದ ಜನರಿಗೆ ರಕ್ಷಣೆ ನೀಡುವ ಎಲ್ಲಾ ರೀತಿಯ ವೈಯಕ್ತಿಕ ರಕ್ಷಣಾ ಸಾಧನಗಳ ರಫ್ತಿಗೆ ಕಳೆದ ತಿಂಗಳು ಕೇಂದ್ರ ಸರಕಾರ ನಿಷೇಧ ವಿಧಿಸಿತ್ತು.

ಚೀನಾದಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ಕೊರೋನಾ ವೈರಸ್ ನಿಂದಾಗಿ ಇಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆಯಿದ್ದು ಸರಕಾರದ ಈ ನಿರ್ಧಾರ ಮಹತ್ವ ಪಡೆದಿದೆ. ಶಸ್ತ್ರಚಿಕಿತ್ಸೆ ಮಾಸ್ಕ್, ಬಳಸಿ ಬಿಸಾಡುವ ಮಾಸ್ಕ್ ಹಾಗೂ ಕೈಗವಸುಗಳ (ಎನ್‌ಬಿಆರ್ ಕೈಗವಸುಗಳನ್ನು ಹೊರತುಪಡಿಸಿ) ರಫ್ತಿಗೆ ವಿಧಿಸಲಾಗಿರುವ ನಿಷೇಧ ತೆರವಾಗಿದೆ . ಆದರೆ ಮುಖಗವಚ ಹಾಗೂ ಕೈಗವಚದ ಜೊತೆಗಿನ ಉಪಕರಣಗಳಾದ ಎನ್-95 ಮತ್ತು ಇತರ ಸಾಧನಗಳ ರಫ್ತು ನಿಷೇಧ ಮುಂದುವರಿಯುತ್ತದೆ ಎಂದು ವಿದೇಶ ವ್ಯವಹಾರದ ಪ್ರಧಾನ ನಿರ್ದೇಶನಾಲಯದ ಅಧಿಸೂಚನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News