ಕೊರೋನವೈರಸ್ ಬಗ್ಗೆ ವರದಿ ಮಾಡುತ್ತಿದ್ದ ಚೀನಾದ ಸಿಟಿಝನ್ ಜರ್ನಲಿಸ್ಟ್ ನಾಪತ್ತೆ

Update: 2020-02-10 17:13 GMT

ಬೀಜಿಂಗ್, ಫೆ. 10: ಕಳೆದ ಎರಡು ವಾರಗಳಲ್ಲಿ ಚೀನಾದ ಸಿಟಿಝನ್ ಜರ್ನಲಿಸ್ಟ್‌ಗಳಾದ ಚೆನ್ ಕಿಯುಶಿ ಮತ್ತು ಫಾಂಗ್ ಬಿನ್, ಕೊರೋನವೈರಸ್ ಸೋಂಕಿನ ಕೇಂದ್ರ ಸ್ಥಾನವಾದ ವುಹಾನ್ ನಗರ ಮತ್ತು ಹೊರ ಜಗತ್ತಿನ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಿದ್ದರು. ಬೀಗಮುದ್ರೆಗೆ ಒಳಗಾಗಿರುವ ನಗರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರು ಜಗತ್ತಿಗೆ ವಿವರಿಸುತ್ತಿದ್ದರು. ತಮ್ಮ ಮೊಬೈಲ್ ಫೋನ್‌ಗಳಿಂದ ಸುದ್ದಿಗಳನ್ನು ಬಿತ್ತರಿಸುತ್ತಿದ್ದ ಅವರು, ವುಹಾನ್ ನಗರದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಹೊರಜಗತ್ತಿಗೆ ತೆರೆದಿಡುತ್ತಿದ್ದರು.

ಅವರ ಹೆಚ್ಚಿನ ವೀಡಿಯೊಗಳು ಟ್ವಿಟರ್ ಮತ್ತು ಯೂಟ್ಯೂಬ್‌ಗಳಲ್ಲಿ ಕಾಣಿಸಿಕೊಂಡಿವೆ. ಈಗ ಅವರ ಪೈಕಿ ಒಬ್ಬರು ನಾಪತ್ತೆಯಾಗಿದ್ದಾರೆ.

20 ಗಂಟೆಗಳಿಗೂ ಹೆಚ್ಚಿನ ಅವಧಿಯಿಂದ ಚೆನ್ ಯಾರಿಗೂ ಸಿಗುತ್ತಿಲ್ಲ. ಫಾಂಗ್ ಶುಕ್ರವಾರ ಹೆಚ್ಚಿನ ಸಮಯ ವೌನವಾಗಿದ್ದು, ಸಂಜೆ ವೀಡಿಯೊವೊಂದನ್ನು ಹಾಕಿದ್ದರು. ಅವರನ್ನು ಅದಕ್ಕೂ ಮುಂಚೆ ಅಧಿಕಾರಿಗಳು, ಆಸ್ಪತ್ರೆಯೊಂದರಲ್ಲಿನ ಶವಗಳ ವೀಡಿಯೊವೊಂದನ್ನು ಹಾಕಿರುವುದಕ್ಕಾಗಿ ಸ್ವಲ್ಪಕಾಲ ಬಂಧಿಸಿದ್ದರು. ಈ ದೃಶ್ಯವನ್ನು ಅವರು ಚಿತ್ರಿಸಿದಾಗ, ಸೋಂಕು ನಿರೋಧಕ ದಿರಿಸು ಧರಿಸಿದ್ದ ವ್ಯಕ್ತಿಗಳು ಅವರ ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿ ಅವರನ್ನು ಪ್ರತ್ಯೇಕ ಸ್ಥಳ (ಕ್ವಾರಂಟೈನ್)ದಲ್ಲಿಟ್ಟಿದ್ದಾರೆ.

ಚೆನ್ ತುಂಬಾ ಸಮಯದಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಗುರುವಾರ ಸಂಜೆ 7 ಗಂಟೆಯಿಂದ ಕಾಣಿಸುತ್ತಿಲ್ಲ ಅವರ ಸ್ನೇಹಿತರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News