×
Ad

ಮೂರನೇ ಬಾರಿ ಅಲನ್ ಬಾರ್ಡರ್ ಪದಕ ಗೆದ್ದ ಡೇವಿಡ್ ವಾರ್ನರ್

Update: 2020-02-10 23:42 IST

ಮೆಲ್ಬೋರ್ನ್, ಫೆ.10: ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಆಸ್ಟ್ರೇಲಿಯ ಕ್ರಿಕೆಟ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೂರನೇ ಬಾರಿ ಅಲನ್ ಬಾರ್ಡರ್ ಪದಕ ತನ್ನದಾಗಿಸಿಕೊಂಡರು. ಮಹಿಳಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಎರಡನೆ ಬಾರಿ ಬೆಲಿಂಡಾ ಕ್ಲಾರ್ಕ್ ಪದಕ ಗೆದ್ದುಕೊಂಡರು.

 ಸಹ ಆಟಗಾರ ಸ್ಟೀವ್ ಸ್ಮಿತ್‌ರನ್ನು ಕೇವಲ ಒಂದು ಮತದಿಂದ ಮಣಿಸಿದ ವಾರ್ನರ್ ಪ್ರತಿಷ್ಠಿತ ಪದಕವನ್ನು ಗೆದ್ದುಕೊಂಡರು. ವೇಗದ ಬೌಲರ್ ಹಾಗೂ ಕಳೆದ ವರ್ಷದ ಪದಕ ವಿಜೇತ ಪ್ಯಾಟ್ ಕಮಿನ್ಸ್ ಮೂರನೇ ಸ್ಥಾನ ಪಡೆದರು.

 ವಾರ್ನರ್ ಈ ಹಿಂದೆ 2016 ಹಾಗೂ 2017ರಲ್ಲಿ ಬಾರ್ಡರ್ ಪದಕ ಜಯಿಸಿದ್ದರು. ಈ ಬಾರಿ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 194 ಮತಗಳನ್ನು ಪಡೆದು ಮಾಜಿ ನಾಯಕ ಸ್ಮಿತ್ ಹಾಗೂ ಕಮಿನ್ಸ್‌ರನ್ನು ಹಿಂದಿಕ್ಕಿದರು. ಮೂರನೇ ಬಾರಿ ಅಲನ್ ಬಾರ್ಡರ್ ಪದಕ ಜಯಿಸಿದ ವಾರ್ನರ್ ಅವರು ರಿಕಿ ಪಾಂಟಿಂಗ್, ಮೈಕಲ್ ಕ್ಲಾರ್ಕ್, ಶೇನ್ ವ್ಯಾಟ್ಸ್ ಹಾಗೂ ಸ್ಮಿತ್ ಕ್ಲಬ್‌ಗೆ ಸೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News