ಚೀನಾ ಪ್ರವಾಸಿಗರಿಗೆ ಆಸ್ಟ್ರೇಲಿಯ ನಿಷೇಧ

Update: 2020-02-13 17:28 GMT

 ಸಿಡ್ನಿ,ಫೆ.13: ಮಹಾಮಾರಿ ಕೊರೊನಾ ವೈರಸ್ ಹಾವಳಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 1 ಸಾವಿರವನ್ನು ದಾಟಿರುವಂತೆಯೇ, ಆ ದೇಶದಿಂದ ಪ್ರವಾಸಿಗರ ಆಗಮನಕ್ಕೆ ವಿಧಿಸಲಾಗಿರುವ ನಿಷೇಧವನ್ನು ವಿಸ್ತರಿಸಿರುವುದಾಗಿ ಆಸ್ಟ್ರೇಲಿಯ ಗುರುವಾರ ಘೋಷಿಸಿದೆ.

  ಇತ್ತೀಚೆಗೆ ಚೀನಾದ ಮುಖ್ಯಭೂಮಿಯಲ್ಲಿದ್ದ ವಿದೇಶಿ ಪ್ರಜೆಗಳಿಗೆ ಹೇರಿದ್ದ ನಿಷೇಧವನ್ನು ಇನ್ನೂ ಒಂದು ವಾರದವರೆಗೆ ವಿಸ್ತರಿಸಲಾಗಿದೆ ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ತಿಳಿಸಿದ್ದಾರೆ. ಆಸ್ಟ್ರೇಲಿಯನ್ನರನ್ನು ಕೊರೋನ ವೈರಸ್ ಸೋಂಕಿನಿಂದ ರಕ್ಷಿಸುವುದೇ ಇದರ ಉದ್ದೇಶವೆಂದು ಅವರು ಹೇಳಿದ್ದಾರೆ.

 ಆಸ್ಟ್ರೇಲಿಯ ಸರಕಾರದ ಈ ನಿರ್ಧಾರದಿಂದಾ ಚೀನಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಕುಸಿತವಾಗಲಿದ್ದು, ಆಸ್ಟ್ರೇಲಿಯದ ಪ್ರವಾಸೋದ್ಯಮ ನಿರ್ವಾಹಕರಿಗೆ ಭಾರೀ ದೊಡ್ಡ ಹೊಡೆತ ನೀಡಲಿದೆ. ನೂತನ ಶೈಕ್ಷಣಿಕ ವರ್ಷದಲ್ಲಿ ಆಸ್ಟ್ರೇಲಿಯಕ್ಕೆ ಮರಳುತ್ತಿರುವ ಚೀನಿ ವಿದ್ಯಾರ್ಥಿಗಳು ಕೂಡಾ ಈ ನಿರ್ಧಾರದಿಂದಾಗಿ ತೊಂದರೆಗೀಡಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News