ಇಂಡೊನೇಶ್ಯ: ಜ್ವಾಲಾಮುಖಿ ಸ್ಫೋಟ

Update: 2020-02-13 17:30 GMT

ಜಕಾರ್ತ,ಫೆ.2: ಜಗತ್ತಿನ ಅತ್ಯಂತ ಸಕ್ರಿಯವಾಗಿರುವ ಜ್ವಾಲಾಮುಖಿ ಗಳಲ್ಲೊಂದಾದ ಇಂಡೊನೇಶ್ಯದ ಮೆರಾಪಿ ಪರ್ವ ಗುರುವಾ ಮತ್ತೆ ಬೆಂಕಿಬಣ್ಣದ ಕೆಂಪು ಲಾವಾರಸವನ್ನು ಸ್ಫೋಟಿಸಿದೆ. ಜ್ವಾಲಾಮುಖಿಯಿಂದಾಗಿ 2 ಸಾವಿರ ಮೀಟರ್‌ಗೂ ಅಧಿಕ ಎತ್ತರದವರೆಗೆ ಬೂದಿ ಆವೃತವಾಗಿದೆ. ಸೋಮವಾರ ಮೆವಪಿ ಪರ್ವತದಲ್ಲಿ ಸ್ಫೋಟಿಸಿದ ಜ್ವಾಲಾಮುಖಿಯಿಂದಾಗಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದರು.

  

ಇಂದು ಮುಂಜಾನೆ ವೇಳೆ ಜ್ವಾಲಾಮುಖಿ ಸ್ಫೋಟಿಸಿದ್ದು, ಈ ಪ್ರದೇಶದಲ್ಲಿ ಹಾರಾಟ ನಡೆಸುವ ವಾಣಿಜ್ಯ ವಿಮಾನಗಳು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪರ್ವತದ 3 ಕಿ.ಮೀ. ವ್ಯಾಪ್ತಿಯಿಂದ ದೂರವಿರುವಂತೆ ಸ್ಥಳೀಯ ನಿವಾಸಿಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜ್ವಾಲಾಮುಖಿಯು 10 ಕಿ.ಮೀ. ದೂರದವರೆಗೆ ದಟ್ಟವಾದ ಬೂದಿಯ ರಾಶಿಯನ್ನು ಕಾರಿರುವುದಾಗಿ ಜ್ವಾಲಾಮುಖಿ ಶಾಸ್ತ್ರ ಹಾಗೂ ಭೌಗೋಳಿಕ ಅಪಾಯ ನಿವಾರಣಾ ಕೇಂದ್ರದ ಹೇಳಿಕೆಯು ತಿಳಿಸಿದೆ.

  ಈ ಮಧ್ಯೆ ಸೋಮವಾರ ಜ್ವಾಲಾಮುಖ ಸ್ಫೋಟದಿಂದಾಗಿ ಮೃತಪಟ್ಚ ಎಂಟು ಮಂದಿಯ ಶವಗಳನ್ನು ತೆರವುಗೊಳಿಸಲು ನ್ಯೂಝಿಲ್ಯಾಂಡ್‌ನಿಂದ ವಾಯುಪಡೆಯ ವಿಮಾನಗಳು ಬುಧವಾರ ವಾಟಾಕಟಾನೆ ವಿಮಾನನಿಲ್ದಾಣಕ್ಕೆ ಬಂದಿಳಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News