ಪ್ರೇಮಿಗಳ ದಿನದಂದು ಪ್ರಧಾನಿಗೆ ಶಾಹಿನ್ ಬಾಗ್ ಗೆ ವಿಶೇಷ ಆಹ್ವಾನ: ಪ್ರತಿಭಟನಕಾರರು ಹೇಳಿದ್ದೇನು ಗೊತ್ತಾ?

Update: 2020-02-13 17:33 GMT
Photo: twitter.com/TumKabAaoge2020

ಹೊಸದಿಲ್ಲಿ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಶಾಹಿನ್ ಬಾಗ್ ನ ಪ್ರತಿಭಟನಕಾರರು ಪ್ರೇಮಿಗಳ ದಿನದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಆಹ್ವಾನ ನೀಡಿದ್ದು, ಶಾಹಿನ್ ಬಾಗ್ ಗೆ ಆಗಮಿಸಿ ತಮ್ಮೊಂದಿಗೆ 'ಪ್ರೇಮಿಗಳ ದಿನ' ಆಚರಿಸಿ ಎಂದಿದ್ದಾರೆ.

ಡಿಸೆಂಬರ್ 15ರಿಂದ ಸಿಎಎ ವಿರುದ್ಧ ಶಾಹಿನ್ ಬಾಗ್ ನಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ಕಾರ್ಯಕ್ರಮಕ್ಕೆ ಬಂದರೆ ಅವರಿಗಾಗಿ 'ಪ್ರೀತಿಯ ಹಾಡು' ಮತ್ತು 'ಉಡುಗೊರೆ' ನೀಡಲಾಗುವುದು ಎಂದು ಪ್ರತಿಭಟನಕಾರರು ಹೇಳಿದ್ದಾರೆ.

'ಪ್ರಧಾನಿ ಮೋದಿಯವರೇ, ದಯವಿಟ್ಟು ಶಾಹಿನ್ ಬಾಗ್ ಗೆ ಬನ್ನಿ. ನಿಮ್ಮ ಉಡುಗೊರೆ ಪಡೆದುಕೊಳ್ಳಿ ಮತ್ತು ನಮ್ಮ ಜೊತೆ ಮಾತನಾಡಿ' ಎಂದು ಬರೆದಿರುವ ಪೋಸ್ಟರ್ ಗಳ ಫೋಟೊ ವೈರಲ್ ಆಗುತ್ತಿದೆ.

"ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಯಾರೇ ಆಗಲಿ ನಮ್ಮ  ಜೊತೆ ಮಾತನಾಡಲಿ. ಏನೇ ನಡೆದರೂ ಅದು ಸಂವಿಧಾನದ ವಿರುದ್ಧವಾಗಿ ಇರುವುದಿಲ್ಲ ಎಂದು ಅವರು ನಮ್ಮ ಮನವೊಲಿಸಿದರೆ, ನಾವು ಪ್ರತಿಭಟನೆಯನ್ನು ಕೊನೆಗೊಳಿಸುತ್ತೇವೆ" ಎಂದು ಪ್ರತಿಭಟನಕಾರರಲ್ಲೋರ್ವರಾದ ಸೈಯದ್ ತಸೀರ್ ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News