ಶೀಘ್ರ ಅಮೆರಿಕ-ತಾಲಿಬಾನ್ ಒಪ್ಪಂದ?

Update: 2020-02-14 17:36 GMT

ಬ್ರಸೆಲ್ಸ್ (ಬೆಲ್ಜಿಯಮ್), ಫೆ. 14: ಅಫ್ಘಾನಿಸ್ತಾನದಲ್ಲಿ ಏಳು ದಿನಗಳ ‘ಹಿಂಸಾಚಾರ ಕಡಿತ’ವನ್ನು ಅಮೆರಿಕ ಘೋಷಿಸಿದೆ ಹಾಗೂ ಈ ಅವಧಿಯಲ್ಲಿ ತಾಲಿಬಾನ್ ಉಗ್ರ ಗುಂಪಿನ ಜೊತೆ ಒಪ್ಪಂದವೊಂದನ್ನು ಮಾಡಿಕೊಳ್ಳಲು ಸಾಧ್ಯವಾಗಬಹುದು ಎಂಬ ಭರವಸೆಯನ್ನು ಅದು ವ್ಯಕ್ತಪಡಿಸಿದೆ.

 ತಾಲಿಬಾನ್ ಜೊತೆಗಿನ ಮಾತುಕತೆಯಲ್ಲಿ ‘ಗಣನೀಯ ಪ್ರಗತಿ’ ಕಂಡುಬಂದಿದೆ ಎಂಬುದಾಗಿ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಘೋಷಿಸಿದ ಒಂದು ದಿನದ ಬಳಿಕ ಈ ಘೋಷಣೆ ಹೊರಬಿದ್ದಿದೆ.

‘‘ಏಳು ದಿನಗಳ ಕಾಲ ಹಿಂಸಾಚಾರದಲ್ಲಿ ಕಡಿತ ಮಾಡುವ ಸಂಬಂಧ ಅಮೆರಿಕ ಮತ್ತು ತಾಲಿಬಾನ್ ಸಂಧಾನ ನಡೆಸಿವೆ’’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಬ್ರಸೆಲ್ಸ್‌ನಲ್ಲಿ ನಡೆದ ನ್ಯಾಟೊ ಸಭೆಯ ಬಳಿಕ ತಿಳಿಸಿದರು.

‘‘ಅಫ್ಘಾನಿಸ್ತಾನ ಸಮಸ್ಯೆಗೆ ರಾಜಕೀಯ ಒಪ್ಪಂದವು ಅತ್ಯುತ್ತಮ ಪರಿಹಾರವೆಂದು ನಾವು ಹೇಳುತ್ತಲೇ ಬಂದಿದ್ದೇವೆ. ಆ ನಿಟ್ಟಿನಲ್ಲಿ ಪ್ರಗತಿಯನ್ನು ಸಾಧಿಸಲಾಗಿದೆ. ಈ ಬಗ್ಗೆ ನಾವು ಶೀಘ್ರವೇ ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ ಎಂದು ನನಗೆ ಅನಿಸುತ್ತದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News