ಸುಪ್ರೀಂ ತರಾಟೆಗೆ ಬೆಚ್ಚಿದ ಡಾಟ್: ಶುಕ್ರವಾರವೇ ಅಂತಿಮ ಗಡುವು!

Update: 2020-02-14 17:47 GMT

ಹೊಸದಿಲ್ಲಿ,ಫೆ.14: ಟೆಲಿಕಾಂ ಕಂಪನಿಗಳಿಂದ ಬಾಕಿ ಪಾವತಿಯಲ್ಲಿ ವೈಫಲ್ಯಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ತರಾಟೆಗೆತ್ತ್ತಿಕೊಂಡ ಬೆನ್ನಿಗೇ ಶುಕ್ರವಾರ ರಾತ್ರಿ 11:59ರೊಳಗೆ ಎಲ್ಲ ಬಾಕಿಗಳನ್ನು ಪಾವತಿಸುವಂತೆ ಸರಕಾರವು ಈ ಕಂಪನಿಗಳಿಗೆ ತಾಕೀತು ಮಾಡಿದೆ. ನ್ಯಾಯಾಲಯವು ದೂರಸಂಪರ್ಕ ಇಲಾಖೆ (ಡಾಟ್)ಯನ್ನೂ ತರಾಟೆಗೆತ್ತಿಕೊಂಡಿತ್ತು.

ಈ ಸಂಬಂಧ ಡಾಟ್ ಶುಕ್ರವಾರ ರಾತ್ರಿ 11:59ರೊಳಗೆ ಬಾಕಿಗಳನ್ನು ಪಾವತಿಸುವಂತೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮತ್ತಿತರರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News