ಇಂಡಿಯನ್ ಮಹಿಳಾ ಲೀಗ್ ಗೆದ್ದ ಗೋಕುಲಂ ಕೇರಳ

Update: 2020-02-14 18:56 GMT

ಹೊಸದಿಲ್ಲಿ, ಫೆ.14: ನಾಲ್ಕನೇ ಆವೃತ್ತಿಯ ಇಂಡಿಯನ್ ಮಹಿಳಾ ಲೀಗ್ ಫೈನಲ್‌ನಲ್ಲಿ ಕ್ರೈಫ್ಸಾ ತಂಡವನ್ನು 3-2 ಅಂತರದಿಂದ ಮಣಿಸಿದ ಗೋಕುಲಂ ಕೇರಳ ಚೊಚ್ಚಲ ಭಾರತೀಯ ಮಹಿಳಾ ಲೀಗ್(ಐಡಬ್ಲುಎಲ್)ಜಯಿಸಿದೆ. ಪಿ.ವಿ.ಪ್ರಿಯಾ ತರಬೇತಿಯಲ್ಲಿ ಪಳಗಿರುವ ಗೋಕುಲಂ ತಂಡ ಬೆಂಗಳೂರು ಫುಟ್ಬಾಲ್ ಸ್ಟೇಡಿಯಂನಲ್ಲಿ ಟ್ರೋಫಿಯನ್ನು ಎತ್ತಿ ಹಿಡಿಯಿತು. ಪ್ರಮೇಶ್ವರಿ ದೇವಿ(1ನೇ ನಿಮಿಷ), ಕಮಲಾದೇವಿ(25ನೇ ನಿಮಿಷ) ಹಾಗೂ ಸಬಿತ್ರಾ ಭಂಡಾರಿ(87ನೇ ನಿಮಿಷ)ಕೇರಳದ ಪರ ತಲಾ ಒಂದು ಗೋಲು ಗಳಿಸಿದರು. ಕ್ರೈಫ್ಸಾ ತಂಡದ ಪರ ಡಾಂಗ್‌ಮಿ ಗ್ರೇಸ್(33ನೇ ನಿಮಿಷ) ಹಾಗೂ ರತನ್‌ಬಾಲಾ ದೇವಿ(71ನೇ ನಿಮಿಷ)ತಲಾ ಒಂದು ಗೋಲುಗಳಿಸಿದರು.

ಗೋಕುಲಂ ಕೇರಳ ತಂಡ ಈಗಾಗಲೇ ಐಡಬ್ಲುಎಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಸೇಥು ಎಫ್‌ಸಿ, ರೈಸಿಂಗ್ ಸ್ಟೂಡೆಂಟ್ಸ್ ಕ್ಲಬ್ ಹಾಗೂ ಈಸ್ಟರ್ನ್ ಸ್ಪೋರ್ಟಿಂಗ್ ಯೂನಿಯನ್ ತಂಡವನ್ನು ಸೇರ್ಪಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News