​ಇಂದು ಕೇಜ್ರಿವಾಲ್ ಪ್ರಮಾಣಕ್ಕೆ ಹಲವಾರು ವಿಶೇಷ ಗಣ್ಯರು!

Update: 2020-02-16 03:42 GMT

ಹೊಸದಿಲ್ಲಿ, ಫೆ.16: ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಇಂದು(ಫೆ.16) ಪ್ರಮಾಣ ವಚನ ಸ್ವೀಕರಿಸಲಿದ್ದು, ಹಲವು ಮಂದಿ ವಿಶೇಷ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪೂರ್ವಭಾವಿಯಾಗಿ ಶನಿವಾರ ಸಂಜೆ ಸಾವಿರಾರು ಮಂದಿ ಕಾರ್ಯಕರ್ತರು ಪಕ್ಷದ ಕೇಂದ್ರ ಕಚೇರಿಯ ಎದುರು ಸೇರಿದ್ದರು. ಖಾಲಿ ಸಮವಸ್ತ್ರದಲ್ಲಿ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವ ಗೀತಾದೇವಿ ಪ್ರಮುಖ ಆಕರ್ಷಣೆ.

36 ವರ್ಷದ ಗೃಹರಕ್ಷಕ ದಳ ಸಿಬ್ಬಂದಿಯಾಗಿರುವ ದೇವಿ, ಕೇಜ್ರಿವಾಲ್ ಜತೆ ವೇದಿಕೆ ಹಂಚಿಕೊಳ್ಳಲಿರುವ 50 ಮಂದಿ ಗಣ್ಯರಲ್ಲಿ ಒಬ್ಬರು. ರಾಮಲೀಲಾ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಕೇಜ್ರಿವಾಲ್ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವರು. ಶನಿವಾರ ದೇವಿಯವರು ಪಕ್ಷದ ಕಚೇರಿಗೆ ಆಗಮಿಸಿ ವಿಶೇಷ ಆಮಂತ್ರಣ ಸ್ವೀಕರಿಸಿದರು.

ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜನಸಾಮಾನ್ಯರ ಜತೆ ಕೇಜ್ರಿವಾಲ್ ವೇದಿಕೆ ಹಂಚಿಕೊಳ್ಳುವರು. ದೆಹಲಿ ಬಸ್ ಭದ್ರತೆಗೆ ನಿಯೋಜಿತರಾಗಿರುವ ದೇವಿ ಒಬ್ಬ ಪಿಕ್‌ಪಾಕೆಟರ್‌ನನ್ನು ಬಂಧಿಸಿದ್ದರೆ, ಅವರ ಸಹೋದ್ಯೋಗಿ ಅರುಣ್ ಕುಮಾರ್ (22) ನಾಲ್ಕು ವರ್ಷದ ಬಾಲಕಿಯ ಅಪಹರಣ ತಡೆದಿದ್ದರು. ಇವರಿಬ್ಬರೂ ವಿಶೇಷ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ವೈದ್ಯರು, ಶಿಕ್ಷಕರು, ನೈರ್ಮಲ್ಯ ಕಾರ್ಮಿಕರು, ಬಸ್ ನಿರ್ವಾಹಕರು, ಚಾಲಕರು, ಮಾರ್ಷೆಲ್‌ಗಳು, ಆಟೊ ಚಾಲಕರು, ರೈತರು, ಅಂಗನವಾಡಿ ಕಾರ್ಯಕರ್ತೆರು, ಅಥ್ಲೀಟ್‌ಗಳು, ವಿದ್ಯಾರ್ಥಿಗಳು, ಎಂಜಿನಿಯರ್, ಉದ್ಯಮಿ, ಆ್ಯಂಬುಲೆನ್ಸ್ ಚಾಲಕರು ಹೀಗೆ ವಿವಿಧ ವರ್ಗದ ಜನಸಾಮಾನ್ಯರನ್ನು ಆಹ್ವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News