2 ಕೋಟಿ ರೂ. ಪರಿಹಾರ ಕೇಳಿದ ಗಾಯಾಳು ಜಾಮಿಯಾ ವಿದ್ಯಾರ್ಥಿ: ಕೇಂದ್ರ, ದಿಲ್ಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್

Update: 2020-02-17 09:04 GMT

ಹೊಸದಿಲ್ಲಿ: ಡಿಸೆಂಬರ್ 15ರಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಗಾಯಗೊಂಡಿದ್ದ ವಿದ್ಯಾರ್ಥಿ ಶಯ್ಯಾನ್ ಮುಜೀಬ್ 2 ಕೋಟಿ ರೂ. ಪರಿಹಾರ ಕೋರಿ  ಸಲ್ಲಿಸಿರುವ ಅಪೀಲಿನ ಮೇಲಿನ ವಿಚಾರಣೆ ಕೈಗೆತ್ತಿಕೊಂಡಿರುವ ದಿಲ್ಲಿ ಹೈಕೋರ್ಟ್, ಸೋಮವಾರ ಕೇಂದ್ರ ಸರಕಾರ ಹಾಗೂ ದಿಲ್ಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.

ವಿವಿಯ ಗ್ರಂಥಾಲಯದಲ್ಲಿ ನಡೆದಿದೆಯೆನ್ನಲಾದ ಪೊಲೀಸ್ ದೌರ್ಜನ್ಯದ ವೇಳೆ ಶಯ್ಯಾನ್ ಅವರ ಎರಡೂ ಕಾಲುಗಳಿಗೆ ಗಾಯವಾಗಿದ್ದು, ತಮ್ಮ ಚಿಕಿತ್ಸೆಗಾಗಿ ಅವರು  2 ಲಕ್ಷ ರೂ. ವ್ಯಯಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ.

ರವಿವಾರ ಜಾಮಿಯಾದ ವಿದ್ಯಾರ್ಥಿ ಸಂಘಟನೆ ಡಿಸೆಂಬರ್ 15ರ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ಪೊಲೀಸರು ವಿವಿಯ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಲಾಠಿ ಬೀಸುತ್ತಿರುವುದು ಕಾಣಿಸುತ್ತದೆ.

ತಾವು ವಿವಿಯ ಗ್ರಂಥಾಲಯ ಪ್ರವೇಶಿಸಿಯೇ ಇಲ್ಲವೆಂದು ಆರಂಭದಲ್ಲಿ  ಹೇಳುತ್ತಿದ್ದ ದಿಲ್ಲಿ ಪೊಲೀಸರು ಈ ವೀಡಿಯೋ ಪರಿಶೀಲಿಸುತ್ತಿರುವುದಾಗಿ ಹೇಳಿದ್ದರಲ್ಲದೆ ಈ ವೀಡಿಯೋ ತಿರುಚಲ್ಪಟ್ಟಂತೆ ಕಾಣಿಸುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News