ಫೈನಾನ್ಸ್ ಕಂಪೆನಿಗೆ ನುಗ್ಗಿ 12 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ

Update: 2020-02-17 16:51 GMT

ಹೊಸದಿಲ್ಲಿ, ಫೆ. 17: ಲುಧಿಯಾನದ ಗಿಲ್ ರಸ್ತೆಯಲ್ಲಿರುವ ಹಣಕಾಸು ಸೇವೆಯ ಕಂಪೆನಿಯೊಂದಕ್ಕೆ ಸೋಮವಾರ ಹಾಡುಹಗಲೇ ನುಗ್ಗಿದ ದರೋಡೆಕೋರರು 13 ಕೋಟಿ ರೂಪಾಯಿ ಮೌಲ್ಯದ 30 ಕಿ.ಗ್ರಾಂ. ಚಿನ್ನಾಭರಣಗಳನ್ನು ದೋಚಿದ್ದಾರೆ. ಇಂಡಿಯಾ ಇನ್‌ಫೋಲೈನ್ ಫೈನಾನ್ಸ್ ಲಿಮಿಟೆಡ್ (ಐಐಎಫ್‌ಎಲ್)ನ ಗಿಲ್ ರಸ್ತೆ ಶಾಖೆಗೆ ಪೂರ್ವಾಹ್ನ 11 ಗಂಟೆಗೆ ನುಗ್ಗಿದ ಐವರು ದರೋಡೆಕೋರರು ಪಿಸ್ತೂಲು ತೋರಿಸಿ ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ 13 ಕೋಟಿ ರೂಪಾಯಿ ವೌಲ್ಯದ ಚಿನ್ನಾಭರಣಗಳನ್ನು ದೋಚಿಸಿದ್ದಾರೆ. ಪೊಲೀಸ್ ಆಯುಕ್ತ ರಾಕೇಶ್ ಅಗರ್‌ವಾಲ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಹಾಗೂ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಾಲ್ವರು ಶಾಖೆಯ ಒಳಗೆ ನುಗ್ಗಿ ದರೋಡೆಗೈದರು. ಓರ್ವ ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮುಖವಾಡ ಧರಿಸಿದ ನಾಲ್ವರು ದರೋಡೆಕೋರರಲ್ಲಿ ಇಬ್ಬರು ಚಿನ್ನಾಭರಣ ಇರಿಸಲಾಗಿದ್ದ ಲಾಕರ್ ಕೀ ಹಸ್ತಾಂತರಿಸುವಂತೆ ಕಂಪೆನಿಯ ಸಿಬ್ಬಂದಿಗೆ ಸೂಚಿಸಿದರು. ಇನ್ನಿಬ್ಬರು ಕಂಪೆನಿಯ ಸಿಬ್ಬಂದಿಯನ್ನು ಪಿಸ್ತೂಲು ತೋರಿಸಿ ವಶದಲ್ಲಿ ಇರಿಸಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

 ಘಟನೆ ನಡೆಯುವ ಸಂದರ್ಭ ಗ್ರಾಹಕರು ಇರಲಿಲ್ಲ. ದರೋಡೆಕೋರರು ಅರ್ಧ ಗಂಟೆಯಲ್ಲಿ ಚಿನ್ನಾಭರಣಗಳನ್ನು ದೋಚಿ ಹೊರಗೆ ನಿಲ್ಲಿಸಿದ್ದ ಕಾರಿನನಲ್ಲಿ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News