ಚೀನಾದಲ್ಲಿ ಕೊರೋನಾ ವೈರಸ್ ಅಟ್ಟಹಾಸ; ಭಾರತದಲ್ಲಿ ಕೆಲ ಔಷಧಿಗಳ ಬೆಲೆಯಲ್ಲಿ ಭಾರೀ ಏರಿಕೆ

Update: 2020-02-18 07:20 GMT

ಹೊಸದಿಲ್ಲಿ, ಫೆ.18: ಚೀನಾದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 1,860ರ ಗಡಿ ದಾಟಿದೆ. ಈ ಭೀಕರ ವೈರಸ್‌ಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಚೀನಾಕ್ಕೆ ತೆರಳದಂತೆ ಎಲ್ಲ ದೇಶಗಳ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ. ಇದರ ಪರಿಣಾಮ ಭಾರತದ ಮೇಲೂ ಉಂಟಾಗಿದೆ. ಕೆಲ ಔಷಧಿಗಳ ಬೆಲೆ ಭಾರೀ ಏರಿಕೆ ಕಂಡಿದೆ.

ಭಾರತವು ಔಷಧಿ ತಯಾರಿಕೆಗೆ ಬೇಕಾದ ಕೆಲ ರಾಸಾಯನಿಕಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ನೋವು ನಿವಾರಕಕ್ಕೆ ಬಳಕೆಯಾಗುವ ಪ್ಯಾರಸಿಟಮಾಲ್ ಮಾತ್ರೆ ಬೆಲೆ ಶೇ.40ರಷ್ಟು ಏರಿಕೆ ಕಂಡಿದೆ. ಇನ್ನು ಆ್ಯಂಟಿಬಯಾಟಿಕ್‌ಗಳ ಬೆಲೆ ಶೇ.70ರಷ್ಟು ಏರಿಕೆಯಾಗಿದೆ. ಒಂದು ವೇಳೆ ಮುಂದಿನ ತಿಂಗಳ ಆರಂಭದಲ್ಲಿ ರಾಸಾಯನಿಕಗಳ ಪೂರೈಕೆ ಆಗದಿದ್ದರೆ ಎಪ್ರಿಲ್‌ನಲ್ಲಿ ಫಾರ್ಮಾ ಇಂಡಸ್ಟ್ರಿ ಮೇಲೆ ಭಾರೀ ಪರಿಣಾಮ ಉಂಟಾಗಲಿದೆ ಎನ್ನಲಾಗಿದೆ.

ದೇಶದಲ್ಲಿ ಔಷಧಿಗಳ ಜೊತೆಗೆ ಮೊಬೈಲ್ ದರ ಕೂಡ ಹೆಚ್ಚು ಭೀತಿ ಕಾಡುತ್ತಿದೆ. ಕ್ಸಿಯೋಮಿ, ಒಪ್ಪೋ, ವಿವೋ, ಸ್ಯಾಮ್‌ಸಂಗ್‌ನ ಬಿಡಿ ಭಾಗಗಳು ಚೀನಾದಲ್ಲಿ ಸಿದ್ಧಗೊಳ್ಳುತ್ತವೆ. ಹೀಗಾಗಿ ಈ ಉದ್ಯಮಗಳ ಮೇಲೂ ಹೆಚ್ಚು ಪರಿಣಾಮ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News