ಸಿಎಎ ಕುರಿತು ಸರಕಾರವನ್ನು ತರಾಟೆಗೆ ತೆಗೆದುಕೊಂಡ ಬೃಂದಾ ಕಾರಟ್

Update: 2020-02-18 17:11 GMT

ರಾಯ್‌ಪುರ, ಫೆ. 19: ನೆರೆಯ ದೇಶಗಳಲ್ಲಿ ದೌರ್ಜನ್ಯ ಎದುರಿಸುತ್ತಿರುವ ಜನರ ಕುರಿತು ಕೇಂದ್ರ ಸರಕಾರ ತುಂಬಾ ಕಳವಳ ವ್ಯಕ್ತಪಡಿಸುವುದಾದರೆ, ಮಾನ್ಮಾರ್ ಹಾಗೂ ಪಾಕಿಸ್ತಾನದಲ್ಲಿ ದೌರ್ಜನ್ಯ ಎದುರಿಸುತ್ತಿರುವ ರೊಹಿಂಗ್ಯಾ ಹಾಗೂ ಅಹ್ಮದೀಯ ಮುಸ್ಲಿಮರನ್ನು ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ತರಲು ಯಾಕೆ ಸಾಧ್ಯವಿಲ್ಲ ಎಂದು ಸಿಪಿಎಂ ನಾಯಕಿ ವೃಂದಾ ಕಾರಾಟ್ ಪ್ರಶ್ನಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ‘ವಿಭಜನೀಯ ಹಾಗೂ ತಾರತಮ್ಯ’ದಿಂದ ಕೂಡಿದೆ ಎಂದು ಹೇಳಿರುವ ಅವರು, ಹೊರಗಿನ ಶಕ್ತಿಗಿಂತ ಕೇಂದ್ರ ಸರಕಾರವೇ ಸಂವಿಧಾನವನ್ನು ದುರ್ಬಲಗೊಳಿಸುವುದು ಹಾಗೂ ದೇಶವನ್ನು ವಿಭಜಿಸಿರುವುದರಲ್ಲಿ ತೊಡಗಿರುವುದು ದೇಶದ ದುರಂತ ಎಂದಿದ್ದಾರೆ.

 1950ರಲ್ಲಿ ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಿದಾಗ ಸಂಪೂರ್ಣ ದೇಶ ಸ್ವಾಗತಿಸಿತ್ತು. ಆದರೆ, ಆರ್‌ಎಸ್‌ಎಸ್ ವಿರೋಧಿಸಿತ್ತು ಎಂದು ಅವರು ಹೇಳಿದರು. ‘‘ಅವರು ತಮ್ಮನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಕರೆದುಕೊಳ್ಳುತ್ತಾರೆ. ಆದರೆ, ಅದು ರಾಷ್ಟ್ರೀಯ ಸರ್ವನಾಶ ಸಂಘ’’ ಎಂದು ಬೃಂದಾ ಕಾರಟ್ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ವಿರೋಧಿಸಿ ಇಲ್ಲಿನ ಜೈಸ್ತಂಭ ಚೌಕ್‌ನಲ್ಲಿ ಸೋಮವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಬೃಂದಾ ಕಾರಟ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News