ಬಾಂಬ್ ಸ್ಫೋಟಗಳ ಸದ್ದಿಗೆ ಪುಟ್ಟ ಮಗಳಿಗೆ ನಗಲು ಕಲಿಸುವ ಸಿರಿಯಾದ ವ್ಯಕ್ತಿ

Update: 2020-02-19 09:00 GMT

ಡಮಾಸ್ಕಸ್ : ಯುದ್ಧವಲಯದಲ್ಲಿನ ಉದ್ವಿಗ್ನತೆಯ ವಾತಾವರಣದಲ್ಲೂ  ಸ್ಫೋಟದ ಸದ್ದು ಅಥವಾ ಯುದ್ಧ ವಿಮಾನದ ಸದ್ದು ಕೇಳುವ ವೇಳೆಯೂ ನಗುತ್ತಾ ಇರಲು ತನ್ನ ಮೂರು ವರ್ಷದ ಪುತ್ರಿಗೆ ಸಿರಿಯಾದ ತಂದೆಯೊಬ್ಬರು ಕಲಿಸುತ್ತಿರುವ  ವೀಡಿಯೋ ಹಲವರ ಮನ ಕಲಕಿದೆ.

ಮನೆಯ ಹೊರಗೆ ಸ್ಫೋಟದ ಸದ್ದು ಕೇಳುತ್ತಿರುವಾಗ ಅಪ್ಪ ಮಗಳು ಆಟ ಆಡುತ್ತಿರುವ ವೀಡಿಯೋ ಇದಾಗಿದ್ದು, ಇದರಿಂದ ಮನ ಕರಗಿ ಹಲವರು ಸಿರಿಯಾದಲ್ಲಿ  ಎಲ್ಲಾ ರೀತಿಯ ಹಿಂಸೆ ಅಂತ್ಯಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮನೆಯ ಹೊರಗೆ ಶೆಲ್ ಸ್ಫೋಟದ ಸದ್ದು ಅಥವಾ ವಿಮಾನದ ಸದ್ದು ಕೇಳಿಸುತ್ತದೆಯೇ ಎಂದು ಆ ವ್ಯಕ್ತಿ ಕೇಳಿದಾಗ ಬಾಲಕಿ `ಶೆಲ್' ಅನ್ನುತ್ತಾಳೆ. ಆಗ ಆತ "ಅದು ಬೀಳುವಾಗ ನಾವು ನಗುವ'' ಎಂದು ಹೇಳುತ್ತಾರೆ. ಹೊರಗೆ ಸ್ಫೋಟದ ಸದ್ದು ಕೇಳುತ್ತಲೇ ಮಗು ಜೋರಾಗಿ ನಗುತ್ತಾಳೆ, ಆಗ ಆಕೆಯ ಅಪ್ಪ "ಇದು ತುಂಬಾ ತಮಾಷೆಯಾಗಿದೆ ಅಲ್ಲವೇ?'' ಎಂದು ಕೇಳಿದಾಗ ಬಾಲಕಿ ಹೌದೆಂದು ಹೇಳುತ್ತಾಳೆ.

ಎರಡನೇ ವಿಶ್ವ ಯುದ್ಧ ಕುರಿತಾದ ಚಿತ್ರ `ಲೈಫ್ ಈಸ್ ಬ್ಯೂಟಿಫುಲ್'ನಲ್ಲಿ ಯಹೂದಿ ಅಪ್ಪನೊಬ್ಬ ನಾಝಿ ಶಿಬಿರದಲ್ಲಿ ತನ್ನ ಪುತ್ರನೊಂದಿಗೆ ಅಲ್ಲಿನ ಭಯಾನಕ ವಾತಾವರಣದ ನಡುವೆಯೂ ಹಾಸ್ಯ ಚಟಾಕಿ ಹಾರಿಸುತ್ತಿರುವ ದೃಶ್ಯವಿದೆ.

ಸಿರಿಯಾದ ಅಪ್ಪ-ಮಗಳ ವೀಡಿಯೋಗೆ ಸಾಮಾಜಿಕ ಜಾಲತಾಣಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ ಹಾಗೂ ಅಲ್ಲಿ ಹಿಂಸಾಚಾರ ಆದಷ್ಟು ಬೇಗ ಅಂತ್ಯಗೊಳ್ಳಲಿ ಎಂದು ಹಾರೈಸಿದ್ದಾರೆ.

ಕಳೆದ ಒಂಬತ್ತು ತಿಂಗಳಲ್ಲಿ ಸಿರಿಯಾದಲ್ಲಿ ನಡೆಯುತ್ತಿರುವ ನಾಗರಿಕ ಯುದ್ಧ ಈಗಾಗಲೇ  ಲಕ್ಷಗಟ್ಟಲೆ ಜನರನ್ನು ಬಲಿ ಪಡೆದು ಇನ್ನೂ ಲಕ್ಷಾಂತರ ಜನರು ತಮ್ಮ  ಮನೆಮಠಗಳನ್ನು ಕಳೆದುಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News