ಭಾರತದ ಅಶು, ಆದಿತ್ಯ ಗೆ ಕಂಚು

Update: 2020-02-19 17:37 GMT

 ಹೊಸದಿಲ್ಲಿ. ಫೆ. 19: ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ 2ನೇ ದಿನವಾದ ಬುಧವಾರ ಸಿರಿಯಾದ ಅಬ್ದುಲ್‌ಕರೀಮ್ ಮುಹಮ್ಮದ್ ಅಲ್-ಹಸನ್ ಅವರನ್ನು ಮಣಿಸಿದ ಭಾರತದ ಅಶು 67 ಕೆಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ. 87 ಕೆಜಿ ವಿಭಾಗದಲ್ಲಿ ಸುನೀಲ್ ಕುಮಾರ್ ಅವರ ಐತಿಹಾಸಿಕ ಚಿನ್ನ , 55 ಕೆ.ಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಅರ್ಜುನ್ ಹಲಾಕುರ್ಕಿ ಕಂಚು ಪಡೆದ ಬಳಿಕ ಭಾರತಕ್ಕೆ ಮೂರನೇ ಪದಕ ಲಭಿಸಿದೆ.

ಆದಾಗ್ಯೂ, ಬುಧವಾರ ನಡೆದ 60 ಕೆಜಿ ಗ್ರೀಕೋ-ರೋಮನ್ ಕಂಚಿನ ಪದಕ ಪಂದ್ಯದಲ್ಲಿ ಜ್ಞಾನೇಂದರ್ 0-6ರಿಂದ ಸೋತರು. ಕಿರ್ಗಿಸ್ತಾನ್‌ನ ರೊಲೈಮಾನ್ ಶರ್ಷೆಂಕೋವ್ ಅವರನ್ನು 4-0 ಗೋಲುಗಳಿಂದ ಸೋಲಿಸಿದ ಜಪಾನ್‌ನ ಕೆನಿಚಿರೊ ಫುಮಿಟಾ ಚಿನ್ನ ಗೆದ್ದರು.

 60 ಕಿ.ಗ್ರಾಂನಲ್ಲಿ ಇತರ ಕಂಚು ಕಝಖ್‌ಸ್ತಾನದ ಐಡೋಸ್ ಸುಲ್ತಂಗಲಿಯನ್ನು ಸೋಲಿಸಿದ ಮೆಹದಿ ಸೈಫೊಲ್ಲಾ ಮೊಹ್ಸೆನ್ ನೆಜಾದ್ ಕಂಚು ಗೆದ್ದರು.

  72 ಕೆಜಿ ಗ್ರೀಕೊ-ರೋಮನ್ ವಿಭಾಗದಲ್ಲಿ ಆದಿತ್ಯ ಕುಂಡು ಜಪಾನ್‌ನ ನಾವೊ ಕುಸಾಕರನ್ನು ಒಂದೂವರೆ ನಿಮಿಷದೊಳಗೆ 8-0 ಅಂತರದಿಂದ ಮಣಿಸಿದರು. ಈ ಮೂಲಕ ಕಂಚಿನ ಪದಕ ತನ್ನದಾಗಿಸಿಕೊಂಡರು. ಇದು ಕೂಟದಲ್ಲಿ ಭಾರತ ಗೆದ್ದ 4ನೇ ಪದಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News