2022 ಎಎಫ್‌ಸಿ ವನಿತೆಯರ ಏಶ್ಯನ್ ಕಪ್‌ಗೆ ಭಾರತ ಆತಿಥ್ಯ

Update: 2020-02-19 17:43 GMT

ಕೌಲಲಾಂಪುರ, ಫೆ.19: ಭಾರತ 2022ರಲ್ಲಿ ನಡೆಯಲಿರುವ ಎಎಫ್‌ಸಿ ಮಹಿಳಾ ಏಶ್ಯನ್ ಕಪ್ ಆತಿಥ್ಯವನ್ನು ವಹಿಸಿಕೊಂಡಿದೆ.

 ಭಾರತದಲ್ಲಿ ಫುಟ್ಬಾಲ್ ಚಟುವಟಿಕೆ ಯನ್ನು ಉತ್ತೇಜಿಸಲು ಏಶ್ಯನ್ ಫುಟ್ಬಾಲ್ ಕಾನ್ಫೆಡರೇಶನ್ ನ ಮಹಿಳಾ ಸಮಿತಿ(ಎಎಫ್‌ಸಿ ಡಬ್ಲುಸಿ) ಭಾರತಕ್ಕೆ ಫುಟ್ಬಾಲ್ ಆಯೋಜಿಸಲು ಅವಕಾಶ ಮಾಡಿಕೊಟ್ಟಿದೆ.

 ಭಾರತ ಫಿಫಾ ವಿಮೆನ್ಸ್ ಅಂಡರ್-17 ವರ್ಲ್ಡ್ ಕಪ್‌ನ್ನು ಕಳೆದ ವರ್ಷ ಆಯೋಜಿಸಿತ್ತು. ಇದೇ ಅನುಭವ ಭಾರತಕ್ಕೆ ಮಹಿಳಾ ಏಶ್ಯನ್ ಕಪ್ ಆಯೋಜಿಸಲು ನೆರವಾಗಿದೆ. ಭಾರತ, ಚೈನಾ ತೈಫೆ ಮತ್ತು ಉಜ್ಬೇಕಿಸ್ತಾನ ದೇಶಗಳು ಮಹಿಳಾ ಏಶ್ಯನ್ ಕಪ್ ಆಯೋಜಿಸಲು ಆಸಕ್ತಿ ವಹಿಸಿ ಬಿಡ್ ಸಲ್ಲಿಸಿವೆ. ಭಾರತದಲ್ಲಿ ಮಹಿಳಾ ಏಶ್ಯನ್ ಕಪ್ ಫುಟ್ಬಾಲ್ ಪಂದ್ಯಗಳನ್ನು ಡಿ.ವೈ. ಪಾಟೀಲ್ ಸ್ಟೇಡಿಯಂ, ಟ್ರಾನ್ಸ್ ಸ್ಟಾಡಿಯಾ ಅರೆನಾ ಮತ್ತು ಫಾಟೊರ್ಡಾ ಸ್ಟೇಡಿಯಂನಲ್ಲಿ ಆಯೋಜಿಸಲಾಗುವುದು. ಭಾರತ 2016ರಲ್ಲಿ ಎಎಫ್‌ಸಿ ಅಂಡರ್ -16 ಚಾಂಪಿಯನ್‌ಶಿಪ್, 2017ರಲ್ಲಿ ಫಿಫಾ ಅಂಡರ್-17 ವಿಶ್ವಕಪ್ ಆಯೋಜಿಸಿತ್ತು. ಭಾರತ ಎಫ್‌ಸಿ ವಿಮೆನ್ಸ್ ಏಶ್ಯನ್ ಕಪ್‌ನ ಗುಣಮಟ್ಟವನ್ನು ಇನ್ನಷ್ಟು ಉತ್ತಮಪಡಿಸಲು ಒಪ್ಪಿಕೊಂಡಿದೆ.

 ಎಎಫ್‌ಸಿ ವಿಮೆನ್ಸ್ ಏಶ್ಯನ್ ಕಪ್‌ನಲ್ಲಿ 12 ತಂಡಗಳು ಭಾಗವಹಿಸಲಿವೆ. ಈ ಹಿಂದೆ 8 ತಂಡಗಳು ಕೂಟದಲ್ಲಿದ್ದವು. ಇದೀಗ 4 ತಂಡಗಳು ಜಾಸ್ತಿಯಾಗಿವೆ. ಮೂರು ಗುಂಪುಗಳಲ್ಲಿ 25 ಪಂದ್ಯಗಳನ್ನು ಆಡಲಿವೆ. 8 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News