ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಮೊಟೆರಾ ಸ್ಟೇಡಿಯಂನ ಪಕ್ಷಿನೋಟ

Update: 2020-02-19 18:05 GMT

ಅಹ್ಮದಾಬಾದ್, ಫೆ.19: ಸರ್ದಾರ್ ವಲ್ಲಭಬಾಯ್ ಪಟೇಲ್ ಸ್ಟೇಡಿಯಂ ಎಂದು ಕರೆಯಲ್ಪಡುವ ಮೊಟೆರಾ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತ್ಯಂತ ವಿಸ್ತಾರವಾದ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಳ್ಳಲು ಸಜ್ಜಾಗಿದೆ. 1.10 ಲಕ್ಷ ಆಸನದ ಸಾಮರ್ಥ್ಯ ಯಿರುವ ಈ ಸ್ಟೇಡಿಯಂನ್ನು 700 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಫೆ.24ರಂದು ಸ್ಟೇಡಿಯಂನ ಆವರಣದಲ್ಲಿ ನಡೆಯಲಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಟೇಡಿಯಂನ್ನು ಉದ್ಘಾಟಿಸಲಿದ್ದಾರೆ.

 ಅಮೆರಿಕ ಅಧ್ಯಕ್ಷ ಟ್ರಂಪ್ ಫೆ.24ರಂದು ಅಹ್ಮದಾಬಾದ್‌ಗೆ ಭೇಟಿ ನೀಡುವ ಮೊದಲು ಮೊಟೆರಾ ಸ್ಟೇಡಿಯಂನ ವಿಹಂಗಮ ದೃಶ್ಯವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ಹಲವು ಸುದ್ದಿ ತಾಣಗಳು ಬೃಹತ್ ಸ್ಟೇಡಿಯಂನ ಫೋಟೊಗಳನ್ನು ಹಂಚಿಕೊಂಡಿದ್ದವು. ಮೊಟೆರಾ ಸ್ಟೇಡಿಯಂ 2021ರ ಜನವರಿ-ಫೆಬ್ರವರಿಯಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿದ್ದು 1 ಲಕ್ಷ ಪ್ರೇಕ್ಷಕರು ಪಿಂಕ್ ಚೆಂಡಿನ ಟೆಸ್ಟ್ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ಅಭಿಷೇಕ್ ಜೈನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

 ನೂತನ ಸ್ಟೇಡಿಯಂನಲ್ಲಿ ಎರಡು ದೊಡ್ಡದಾದ ಆಸನದ ಶ್ರೇಣಿಗಳಿವೆ. ಹೊಸ ಕ್ರೀಡಾಂಗಣದಲ್ಲಿ ಕೆಂಪು ಹಾಗೂ ಕಪ್ಪು ಮಣ್ಣನ್ನು ಬಳಸಿ ಬೌನ್ಸ್, ಸ್ಪಿನ್ ಸ್ನೇಹಿ ಹಾಗೂ ಬೌನ್ಸ್ ಹಾಗೂ ಸ್ಪಿನ್ ಸ್ನೇಹಿ ಮಿಶ್ರಿತವಾಗಿರುವ ಒಟ್ಟು 11 ಪಿಚ್‌ಗಳನ್ನು ತಯಾರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News