ಪ್ರಥಮ ಟೆಸ್ಟ್ ಗೆ ಮ್ಯಾಟ್ ಹೆನ್ರಿಗೆ ಅವಕಾಶ

Update: 2020-02-19 18:08 GMT

ವೆಲ್ಲಿಂಗ್ಟನ್,ಫೆ.19: ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರು ಭಾರತ ವಿರುದ್ಧದ ಮೊದಲ ಟೆಸ್ಟ್‌ಗೆ ನ್ಯೂಝಿಲ್ಯಾಂಡ್‌ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನೀಲ್ ವ್ಯಾಗ್ನೆರ್ ಬದಲಿಗೆ ಹೆನ್ರಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಾಗ್ನೆರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಅವರು ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ.

ವಾಗ್ನೆರ್ ನ್ಯೂಝಿಲ್ಯಾಂಡ್ ತಂಡದ ಹಿರಿಯ ವೇಗಿ. ಎಡಗೈ ವೇಗಿ ವ್ಯಾಗ್ನೆರ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 47 ಪಂದ್ಯಗಳಲ್ಲಿ 26.63 ಸರಾಸರಿಯಲ್ಲಿ 204 ವಿಕೆಟ್ ಪಡೆದಿದ್ದಾರೆ. ಹೆನ್ರಿ 12 ಟೆಸ್ಟ್ ಮತ್ತು 52 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಕೈಲ್ ಜಮೀಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾದಾರ್ಪಣೆಗಾಗಿ ಎದುರು ನೋಡುತ್ತಿದ್ದಾರೆ. ಹೆನ್ರಿ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ನಿರ್ಮಿಸಿಲ್ಲ. 12 ಟೆಸ್ಟ್‌ಗಳಲ್ಲಿ 32 ವಿಕೆಟ್ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News