ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತರ ಎಲ್ಲ ಟೂರ್ನಿಗಿಂತ ಮಿಗಿಲು: ಕೊಹ್ಲಿ

Update: 2020-02-19 18:21 GMT

ಹೊಸದಿಲ್ಲಿ,ಫೆ.19: ಪ್ರಸ್ತಾವಿತ 2023-2031ರ ಭವಿಷ್ಯದ ಪ್ರವಾಸಿ ಕಾರ್ಯಕ್ರಮ(ಎಫ್‌ಟಿಪಿ)ಪಟ್ಟಿಯಲ್ಲಿ ಬಿಳಿ ಚೆಂಡಿನ ಕ್ರಿಕೆಟ್‌ನತ್ತ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹೆಚ್ಚು ಒತ್ತು ನೀಡುತ್ತಿರುವ ಹೊರತಾಗಿಯೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಐಸಿಸಿಯ ಇತರ ಎಲ್ಲ ಕ್ರಿಕೆಟ್ ಟೂರ್ನಿಗಳಿಗಿಂತ ಮಿಗಿಲಾಗಿದೆ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತಾವಿತ ಎಫ್‌ಟಿಪಿ ಪಟ್ಟಿಯಲ್ಲಿ ಏಕದಿನ ವಿಶ್ವಕಪ್ ಹಾಗೂ ಟ್ವೆಂಟಿ-20 ವಿಶ್ವಕಪ್ ಅಲ್ಲದೆ ಐಸಿಸಿ ಟ್ವೆಂಟಿ-20 ಹಾಗೂ ಏಕದಿನ ಚಾಂಪಿಯನ್‌ಶಿಪ್ ಕಪ್‌ನ್ನು ಆಯೋಜಿಸುವ ಗುರಿ ಹಾಕಿಕೊಂಡಿದೆ.

‘‘ಐಸಿಸಿ ಪಂದ್ಯಾವಳಿ ಆಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಲ್ಲಿಯೇ ಇರಬೇಕು ಎನ್ನುವುದು ನನ್ನ ಅಭಿಪ್ರಾಯ. ನನಗಂತು ಇತರ ಎಲ್ಲ ಟೂರ್ನಮೆಂಟ್‌ಗಳು ಅದರ ಅಡಿ ಆರಂಭವಾಗುತ್ತದೆ. ಪ್ರತಿ ತಂಡಗಳು ಲಾರ್ಡ್ಸ್‌ನಲ್ಲಿ ಫೈನಲ್ ಪ್ರವೇಶಿಸಲು ಬಯಸುತ್ತಿರುವ ಕಾರಣ ಬಹುಶಃ ಇದು ಎಲ್ಲ ಟೂರ್ನಿಗಿಂತ ದೊಡ್ಡದಾಗಿದೆ’’ ಎಂದು ಕೊಹ್ಲಿ ಹೇಳಿದ್ದಾರೆ.

‘‘ಭಾರತೀಯ ತಂಡ ವಿದೇಶದಲ್ಲಿ ಹೆಚ್ಚು ಪಂದ್ಯಗಳನ್ನು ಆಡದೇ ಇದ್ದರೂ ವಿಶ್ವ ಚಾಂಪಿಯನ್‌ಶಿಪ್ ಟೆಸ್ಟ್ ಕ್ರಿಕೆಟ್‌ನ್ನು ಹೆಚ್ಚು ಕುತೂಹಲ ಘಟ್ಟಕ್ಕೆ ತಲುಪಿಸಿದೆ. ನ್ಯೂಝಿಲ್ಯಾಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯು ಹೆಚ್ಚು ಸ್ಪರ್ಧಾತ್ಮಕವಾಗಿರಲಿದೆ’’ ಎಂದು ಕೊಹ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News