×
Ad

ಬಿಹಾರದ ಗಯಾದಲ್ಲಿ ಮಾವೋಗಳಿಂದ ಶಾಲೆ ಕಟ್ಟಡ ಸ್ಫೋಟ

Update: 2020-02-19 23:59 IST

ಗಯಾ, ಫೆ. 19: ಬಿಹಾರದ ಗಯಾ ಜಿಲ್ಲೆಯ ಬಂಕೇಬಜಾರ್ ಪ್ರದೇಶದಲ್ಲಿ ಶಾಲಾ ಕಟ್ಟಡವನ್ನು ಮಾವೋವಾದಿಗಳು ಡೈನಾಮೈಟ್ ಇರಿಸಿ ಸ್ಫೋಟಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

 ಸೋಂದಾಹ್ ಗ್ರಾಮದಲ್ಲಿರುವ ಮಾಧ್ಯಮಿಕ ಶಾಲೆಯನ್ನು ಶಸಸ್ತ್ರ ಮಾವೋವಾದಿಗಳ ಗುಂಪೊಂದು ಮಂಗಳವಾರ ರಾತ್ರಿ ಡೈನಮೈಟ್ ಇರಿಸಿ ಸ್ಫೋಟಿಸಿತು. ಇದರಿಂದ ಶಾಲೆ ಸಂಪೂರ್ಣ ನಾಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯ ಸಂದರ್ಭ ಈ ಶಾಲೆ ಕಟ್ಟಡವನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ತಾತ್ಕಾಲಿಕ ಕ್ಯಾಂಪ್ ಆಗಿ ಬಳಸಲಾಗಿತ್ತು. ಈ ವರ್ಷ ಫೆಬ್ರವರಿ 6ರಂದು ಕ್ಯಾಂಪ್ ಅನ್ನು ತೆಗೆಯಲಾಗಿತ್ತು. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾವೋವಾದಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಬಂಕೇಬಜಾರ್ ಪೊಲೀಸ್ ಠಾಣೆ ಉಸ್ತುವಾರಿ ಸಂಜಯ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News