ಒಎನ್‌ಜಿಸಿ ಷೇರುದರ ಮಹಾಕುಸಿತಕ್ಕೆ ಕಾರಣವೇನು ಗೊತ್ತೇ?

Update: 2020-02-20 04:12 GMT

ಮುಂಬೈ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಷೇರುಗಳ ಮೌಲ್ಯ ಹದಿನೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 100 ರೂಪಾಯಿಗಿಂತಲೂ ಕಡಿಮೆಯಾಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಬುಧವಾರ 99.30 ರೂಪಾಯಿಗೆ ಮಾರಾಟವಾಗಿವೆ.

ಈ ಷೇರು 7.5 % ಲಾಭಾಂಶ ನೀಡುತ್ತಿದ್ದು, ಶೇಕಡ 20ಕ್ಕಿಂತಲ್ಲೂ ಅಧಿಕ ಗಳಿಕೆ ಹೊಂದಿದೆ. ಇದರ ಮಾರುಕಟ್ಟೆ ನಗದೀಕರಣ 1.25 ಟ್ರಿಲಿಯನ್ ರೂಪಾಯಿ ಆಗಿದ್ದು, ಮೂರು ವರ್ಷಗಳ ನಗದು ಹರಿವಿಗೆ ಹೋಲಿಸಿದರೆ ಇದು ಕಡಿಮೆ. ಸರ್ಕಾರಿ ಸ್ವಾಮ್ಯದ ಈ ತೈಲ ಕಂಪನಿಯ ಷೇರುಗಳ ಮೇಲಿನ ವಿಶ್ವಾಸ ಗಣನೀಯವಾಗಿ ಕುಸಿಯಲು ಏನು ಕಾರಣ?

ಏಕೆಂದರೆ ಡಿಸೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದ ಫಲಿತಾಂಶ ತೀರಾ ನಿರಾಶಾದಾಯಕ. ಕಂಪೆನಿಯಲ್ಲಿ ಇರುವ ಸರ್ಕಾರದ ಪಾಲನ್ನು ಹಿಂಪಡೆಯುವ ಪ್ರಯತ್ನ ನಡೆದಿರುವುದು ಕೂಡಾ ಹೂಡಿಕೆದಾರರ ವಿಶ್ವಾಸ ಕಡಿಮೆಯಾಗಲು ಕಾರಣವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಒಎನ್‌ಜಿಸಿಯಲ್ಲಿ ಸರ್ಕಾರದ ಷೇರು ಪ್ರಮಾಣ 67.72%ದಿಂದ 62.78%ಕ್ಕೆ ಕುಸಿದಿದೆ.

2021ನೇ ಹಣಕಾಸು ವರ್ಷದ ಬಂಡವಾಳ ಹಿಂದೆಗೆತ ಗುರಿಯನ್ನು ತಲುಪಲು ಸರ್ಕಾರ 2,10,000 ಕೋಟಿ ರೂಪಾಯಿಗಳ ಷೇರು ಮಾರಾಟ ಮಾಡುವ ನಿರೀಕ್ಷೆ ಇದೆ ಎಂದು ಎಸ್‌ಬಿಐಕ್ಯಾಪ್ ಸೆಕ್ಯುರಿಟೀಸ್ ವಿಶ್ಲೇಷಿಸಿದೆ. ಇದಾದಲ್ಲಿ ಷೇರು ದರ ಮತ್ತಷ್ಟು ಕುಸಿಯವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಇದರ ಜತೆಗೆ ದೇಶೀಯ ಅನಿಲ ದರ ಕೂಡಾ 2020ರ ಸೆಪ್ಟೆಂಬರ್ ವೇಳೆಗೆ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ. ಇದು ಕೂಡಾ ಷೇರುದರ ಕುಸಿತಕ್ಕೆ ಕಾರಣ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News