ರಾಮ ಜನ್ಮಭೂಮಿ ಟ್ರಸ್ಟ್ ರಚನೆಯಾಗುತ್ತಲೇ ಆರೆಸ್ಸೆಸ್, ಬಿಜೆಪಿ ವಿರುದ್ಧ ಹಿಂದು ಮಹಾಸಭಾ ಆಕ್ರೋಶ!

Update: 2020-02-20 11:31 GMT

ಹೊಸದಿಲ್ಲಿ: ರಾಮ ಜನ್ಮಭೂಮಿ ಟ್ರಸ್ಟ್‍ನಲ್ಲಿ ಈಗಿನ ಸರಕಾರದ ಮುಖಾಂತರ ವಿಶ್ವ ಹಿಂದು ಪರಿಷದ್, ಆರೆಸ್ಸೆಸ್ ಹಾಗೂ ಬಿಜೆಪಿಯ ಮಂದಿಯೇ 'ಆಕ್ರಮಿಸಿಕೊಂಡಿದ್ದಾರೆ' ಎಂದು ಹಿಂದು ಮಹಾಸಭಾ ಆರೋಪಿಸಿದೆ.

ಈಗಿರುವ ಟ್ರಸ್ಟ್  'ನ್ಯಾಯೋಚಿತವಲ್ಲ' ಎಂದು ಹೇಳಿರುವ ಹಿಂದು ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ತಮಗೆ ನೋವಾಗಿದೆ ಎಂದಿದ್ದಾರೆ.

"ನಾವು ಈ ಉದ್ದೇಶಕ್ಕಾಗಿ 1949ರಿಂದ ಹೋರಾಡುತ್ತಿದ್ದೇವೆ. ಈ ಪ್ರಕರಣದ ಭಾಗವಾಗಿಯೂ ನಾವಿದ್ದೆವು. ಇತರ ಹಿಂದು ಸಂಘಟನೆಗಳೂ ಕೆಲಸ ಮಾಡಿವೆ. ಆದರೆ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಟ್ರಸ್ಟ್ ರಚಿಸುವ ಕೆಲಸವನ್ನು ಸರಕಾರಕ್ಕೆ ವಹಿಸಿದ ನಂತರ ವಿಹಿಂಪ ಮತ್ತು ಸಂಘ ಅದನ್ನು ಆಕ್ರಮಿಸಿವೆ. ಇದು ದುರದೃಷ್ಟಕರ'' ಎಂದು  ಮಹಾಸಭಾ ಹೇಳಿದೆ.

"ಸರಕಾರ ಎಲ್ಲಾ ಸಂಬಂಧಿತರನ್ನೂ ಆಹ್ವಾನಿಸಿ ಅವರ ಸಲಹೆಗಳನ್ನು ಕೇಳುವ ಅಥವಾ ಅವರಿಗೆ ಧನ್ಯವಾದ ತಿಳಿಸುವ ಗೋಜಿಗೂ ಹೋಗಿಲ್ಲ'' ಎಂದು ಚಕ್ರಪಾಣಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News