ಭಾರತ ಹಲವು ವರ್ಷಗಳಿಂದ ತೆರಿಗೆ ವಿಧಿಸಿ ಅಮೆರಿಕಕ್ಕೆ ಪೆಟ್ಟು ನೀಡುತ್ತಿದೆ: ಟ್ರಂಪ್

Update: 2020-02-21 16:54 GMT

ವಾಶಿಂಗ್ಟನ್, ಫೆ. 21: ಭಾರತವು ಹಲವು ವರ್ಷಗಳಿಂದ ಅಧಿಕ ತೆರಿಗೆಗಳನ್ನು ವಿಧಿಸಿ ವ್ಯಾಪಾರದಲ್ಲಿ ಅಮೆರಿಕಕ್ಕೆ ಭಾರೀ ಪೆಟ್ಟು ನೀಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ್ದಾರೆ.

 ಫೆಬ್ರವರಿ 24 ಮತ್ತು 25ರ ನನ್ನ ಭಾರತ ಪ್ರವಾಸದ ವೇಳೆ, ಅಮೆರಿಕದ ಉತ್ಪನ್ನಗಳನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಜೊತೆ ವ್ಯಾಪಾರದ ಬಗ್ಗೆ ಮಾತನಾಡುತ್ತೇನೆ ಎಂದು ಭಾರತ ಪ್ರವಾಸಕ್ಕೆ ಮುನ್ನ ಗುರುವಾರ ಕೊಲರಾಡೊದಲ್ಲ ‘ಕೀಪ್ ಅಮೆರಿಕ ಗ್ರೇಟ್’ ಸಭೆಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

‘‘ನಾನು ನಿಜವಾಗಿಯೂ ಮೋದಿಯನ್ನು ಇಷ್ಟಪಡುತ್ತೇನೆ ಹಾಗೂ ನಾವು ವ್ಯಾಪಾರದ ಬಗ್ಗೆ ಮಾತನಾಡುತ್ತೇವೆ’’ ಎಂದು ತನ್ನ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News