×
Ad

ಟ್ರಂಪ್ ಅವರೊಂದಿಗೆ ಮೋದಿ ಆಗ್ರಾಕ್ಕೆ ಭೇಟಿ ನೀಡುವುದಿಲ್ಲ

Update: 2020-02-22 23:52 IST

ಹೊಸದಿಲ್ಲಿ, ಫೆ. 22: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಆಗ್ರಾಕ್ಕೆ ಭೇಟಿ ನೀಡುವುದಿಲ್ಲ ಎಂದು ಮೂಲಗಳು ಶನಿವಾರ ತಿಳಿಸಿವೆ.

‘‘ಆಗ್ರಾಕ್ಕೆ ಭೇಟಿ ನೀಡುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರಳಲಿದ್ದಾರೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಕಂಡು ಬಂದಿದೆ. ತಾಜ್‌ಮಹಲ್ ವೀಕ್ಷಿಸುವ ಸಲುವಾಗಿ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದುದರಿಂದ ಭಾರತದ ಕಡೆಯಿಂದ ಗಣ್ಯರು ಪಾಲ್ಗೊಳ್ಳುವುದಿಲ್ಲ’’ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News