ಜಪಾನ್: ಹಡಗಿನಲ್ಲಿದ್ದ 12 ಭಾರತೀಯರಲ್ಲಿ ಕೊರೊನಾ ವೈರಸ್ ಪತ್ತೆ

Update: 2020-02-23 17:44 GMT

ಹೊಸದಿಲ್ಲಿ, ಫೆ.23: ಜಪಾನ್‌ನ ಕಡಲ ತೀರದಲ್ಲಿ ಲಂಗರು ಹಾಕಿದ್ದ ಡೈಮಂಡ್ ಪ್ರಿನ್ಸೆಸ್ ಎಂಬ ಹಡಗಿನಲ್ಲಿದ್ದ ಮತ್ತೂ ನಾಲ್ವರು ಭಾರತೀಯ ಸಿಬಂದಿಗಳಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಎರಡು ದಿನದ ಹಿಂದೆ ನಡೆಸಿದ್ದ ತಪಾಸಣೆಯಲ್ಲಿ 8 ಭಾರತೀಯರಲ್ಲಿ ಸೋಂಕು ಪತ್ತೆಯಾಗಿತ್ತು.

ಜಪಾನ್ ಕಡಲತೀರಕ್ಕೆ ಆಗಮಿಸಿದ್ದ ಈ ಹಡಗಿನಲ್ಲಿರುವ 3,711 ಪ್ರಯಾಣಿಕರಲ್ಲಿ ಸುಮಾರು 1,000 ಪ್ರಯಾಣಿಕರಿಗೆ ಹಡಗಿನಲ್ಲಿಯೇ ಇರುವಂತೆ ಸೂಚಿಸಲಾಗಿದೆ. ದುರದೃಷ್ಟವಶಾತ್, 12 ಭಾರತೀಯರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಪಾನ್‌ನಲ್ಲಿರುವ ಭಾರತೀಯ ದೂತಾವಾಸ ಟ್ವೀಟ್ ಮಾಡಿದೆ.

ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ ಸೋಂಕು ಪೀಡಿತರನ್ನು ಇತರರಿಂದ ಪ್ರತ್ಯೇಕಿಸಲಾಗಿದೆ. ಸೋಂಕು ಪೀಡಿತರ ನಿಕಟ ಸಂಪರ್ಕದಲ್ಲಿದ್ದ ಸುಮಾರು 100 ಪ್ರಯಾಣಿಕರಿಗೆ ಹಡಗಿನಿಂದ ಕೆಳಗಿಳಿಯಲು ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಡಗಿನಲ್ಲಿರುವ 3,711 ಪ್ರಯಾಣಿಕರಲ್ಲಿ 138 ಭಾರತೀಯರಿದ್ದಾರೆ( 132 ಸಿಬಂದಿಗಳು, 6 ಪ್ರಯಾಣಿಕರು).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News