ಇಂಡಿಯನ್ ಐಡಲ್ ಗೆದ್ದ ಸನ್ನಿ ಹಿಂದೂಸ್ತಾನಿ

Update: 2020-02-23 18:42 GMT
ಫೋಟೊ ಕೃಪೆ: SonyTV/ twitter

ಹೊಸದಿಲ್ಲಿ, ಫೆ.23: ಪಂಜಾಬ್‌ನ ಭಟಿಂಡಾದ ಯುವಕ ಸನ್ನಿ ಹಿಂದೂಸ್ಥಾನಿ ಇಂಡಿಯನ್ ಐಡಲ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಸೋನಿ ಚಾನೆಲ್‌ನ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್‌ನ ಸೀಸನ್ 11ರಲ್ಲಿ ಈ ಪ್ರತಿಷ್ಠಿತ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ. ಸನ್ನಿ ಹಿಂದೂಸ್ಥಾನಿ ಅವರಿಗೆ ಟ್ರೋಫಿ ಜೊತೆಗೆ 25 ಲಕ್ಷ ರೂ. ನಗದು ಪ್ರಶಸ್ತಿ ದೊರೆತಿದೆ. ಜೊತೆಗೆ ಟಿ-ಸಿರೀಸ್ ಸಂಸ್ಥೆಯಲ್ಲಿ ಹಾಡು ಕಂಟ್ರಾಕ್ಟ್ ಕೂಡಾ ಅವರಿಗೆ ದೊರೆತಿದೆ.

ಇಂಡಿಯನ್ ಐಡಲ್‌ನಲ್ಲಿ ಸನ್ನಿ ಹಿಂದೂಸ್ತಾನಿ ಮಧುರ ಕಂಠದಿಂದ ಹೊರಹೊಮ್ಮಿದ ನುಸ್ರತ್ ಫತೇ ಅಲಿಖಾನ್‌ರ ಅಫ್ರೀನ್ ಅಫ್ರೀನ್ ಹಾಡು ತೀರ್ಪುಗಾರರನ್ನು ಮೋಡಿ ಮಾಡಿತ್ತು.

ಸನ್ನಿ ಹಿಂದೂಸ್ಥಾನಿ ಫೈನಲ್ಸ್‌ನಲ್ಲಿ 'ಮೇರೆ ರಶ್ಕೆ ಕಮರ್' ಹಾಗೂ 'ಹಲ್ಕಾ ಹಲ್ಕಾ ಸುರೂರ್' ಸೇರಿದಂತೆ ಹಲವು ಜನಪ್ರಿಯ ಹಾಡುಗಳನ್ನು ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು. 'ಇಂಡಿಯನ್ ಐಡಲ್‌'ನ ಸೀಸನ್ 11ರ ಮೊದಲ ಹಾಗೂ ದ್ವಿತೀಯ ರನ್ನರ್ ಅಪ್‌ಗಳು ತಲಾ ಐದು ಲಕ್ಷ ಪಡೆದರೆ, ನಾಲ್ಕನೆ ಹಾಗೂ ಐದನೆ ರನ್ನರ್ ಅಪ್ ಗಳಿಗೆ ತಲಾ ಮೂರು ಲಕ್ಷ ದೊರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News