​ಗಾಝಾ: ಇಸ್ರೇಲ್‌ನಿಂದ ರಾಕೆಟ್ ದಾಳಿ

Update: 2020-02-24 17:08 GMT

ಟೆಲ್‌ಅವೀವ್,ಫೆ.24: ಇಸ್ರೇಲ್ ಸೇನೆ ಸೋಮವಾರ ಮುಂಜಾನೆ ಗಾಝಾ ಹಾಗೂ ಸಿರಿಯದಲ್ಲಿರುವ ಫೆಲೆಸ್ತೀನ್ ಹೋರಾಟಗಾರರ ಗುರಿಗಳ ಮೇಲೆ ಸರಣಿ ರಾಕೆಟ್ ದಾಳಿಗಳನ್ನು ನಡೆಸಿದೆ. ದಕ್ಷಿಣ ಇಸ್ರೇಲ್‌ನೆಡೆಗೆ ಫೆಲೆಸ್ತೀನ್ ಹೋರಾಟಗಾರರು ರವಿವಾರ ರಾಕೆಟ್ ದಾಳಿ ನಡೆಸಿರುವುದಕ್ಕಾಗಿ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಿದ್ದಾಗಿ ಅದು ಹೇಳಿದೆ.

ರವಿವಾರ ದಕ್ಷಿಣ ಇಸ್ರೇಲ್ ಮೇಲೆ ನಡೆದ ರಾಕೆಟ್ ದಾಳಿಯ ಹೊಣೆಯನ್ನು ಫೆಲೆಸ್ತೀನ್‌ನ ‘ಇಸ್ಲಾಮಿಕ್ ಜಿಹಾದ್’ ಎಂಬ ಗುಂಪು ವಹಿಸಿಕೊಂಡಿದೆ.ದಕ್ಷಿಣ ಇಸ್ರೇಲ್ ಮೇಲೆ ಫೆಲೆಸ್ತೀನ್ ಹೋರಾಟಗಾರರು ಕನಿಷ್ಠ 20 ರಾಕೆಟ್‌ಗಳನ್ನು ಎಸೆದಿದ್ದಾರೆಂದು ಇಸ್ರೇಲ್ ಸೇನೆ ಹೇಳಿದೆ. ಆದಾಗ್ಯೂ ದಾಳಿಯಲ್ಲಿ ಇಸ್ರೇಲ್ ಕಡೆಯಿಂದ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ಅದು ಹೇಳಿದೆ. ಆದಾಗ್ಯೂ ಇತ್ತೀಚಿನ ತಿಂಗಳುಗಳಲ್ಲಿ ಗಾಝಾಪಟ್ಟಿ ಪ್ರದೇಶದಿಂದ ಇಸ್ರೇಲ್ ಮೇಲೆ ನಡೆದ ಅತಿ ದೊಡ್ಡ ರಾಕೆಟ್ ದಾಳಿ ಇದಾಗಿದೆಯೆಂದು ವರದಿಗಳು ತಿಳಿಸಿವೆ. ರಾಕೆಟ್ ದಾಳಿಯ ಹಿನ್ನೆಲೆಯಲ್ಲಿ ದಕ್ಷಿಣ ಇಸ್ರೇಲ್ ಪ್ರದೇಶಗಳ ಶಾಲಾ ತರಗತಿಗಳನ್ನು ರದ್ದುಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News