ಮಲೇಶ್ಯ ಪ್ರಧಾನಿ ಮೊಹಾತಿರ್ ರಾಜೀನಾಮೆ

Update: 2020-02-24 17:53 GMT

ಕೌಲಾಲಂಪುರ,ಫೆ.24: ಮಲೇಶ್ಯ ಪ್ರಧಾನಿ ಮಹಾತಿರ್ ಮೊಹಮ್ಮದ್ ಸೋಮವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಮಲೇಶ್ಯದ ದೊರೆಗೆ ಸಲ್ಲಿಸಿದ್ದಾರೆಂದು ರಾಯ್ಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

 ದೇಶದಲ್ಲಿ ನೂತನ ಮೈತ್ರಿ ಸರಕಾರ ರಚನೆ ಕುರಿತಂತೆ ಬಿರುಸಿನ ಮಾತುಕತೆಗಳು ನಡೆಯುತ್ತಿರುವಾಗಲೇ ಮಹಾತಿರ್ ಅವರ ರಾಜೀನಾಮೆ ನೀಡಿದ್ದಾರೆ.

 94 ವರ್ಷದ ಮಹಾತಿರ್ ಅವರು 2018ರ ಮೇನಲ್ಲಿ ಎರಡನೆ ಅವಧಿಗೆ ಮಲೇಶ್ಯದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದಾಗ್ಯೂ ಮಹಾತಿರ್ ಇತರ ಪಕ್ಷಗಳ ಬೆಂಬಲದೊಂದಿಗೆ ನೂತನ ಸರಕಾರದ ನೇತೃತ್ವ ವಹಿಸಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಹಾತಿರ್ ರಾಜೀನಾಮೆಯ ಬೆನ್ನಲ್ಲೇ ಅವರ ಪಕ್ಷವಾದ ‘ಬೆರ್ಸಾತು’ ಕೂಡಾ ಆಡಳಿತ ಮೈತ್ರಿಕೂಟದಿಂದ ಹೊರಬಂದಿದೆಯೆಂದು ಮಲೇಶ್ಯದ ಗೃಹ ಸಚಿವ ಮೊಹಿಯುದ್ದೀನ್ ಯಾಸಿನ್ ತಿಳಿಸಿದ್ದಾರೆ.

ಮಹಾತಿರ್ ಹಾಗೂ ಅವರ ಉತ್ತರಾಧಿಕಾರಿ ಅನ್ವರ್ ಇಬ್ರಾಹೀಂ ನಡುವೆ ಕಳೆದ ಕೆಲವು ತಿಂಗಳುಗಳಿಂದ ಭಿನ್ನಮತ ಭುಗಿಲೆದ್ದಿತ್ತು. ಅನ್ವರ್ ಪ್ರಧಾನಿ ಪಟ್ಟವೇರುವುದನ್ನು ತಡೆಯಲು ಮಹಾತಿರ್ ಮೈತ್ರಿಕೂಟದಿಂದ ಹೊರಬಂದಿರುವುದಾಗಿ ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News