ಈಜುಗಾರ್ತಿ ಸಾಧ್ವಿ ಧುರಿಗೆ ಅವಳಿ ಚಿನ್ನ

Update: 2020-02-25 17:57 GMT

ಭುವನೇಶ್ವರ,ಫೆ.25: ಖೇಲೊ ಇಂಡಿಯಾ ವಿವಿ ಗೇಮ್ಸ್‌ನ ಐದನೇ ದಿನವಾಗಿರುವ ಮಂಗಳವಾರ ಸಾವಿತ್ರಿಬಾಯಿ ಫುಲೆ ಪುಣೆ ವಿವಿಯು 7 ಚಿನ್ನ, 2 ಬೆಳ್ಳಿ ಮತ್ತು ಐದು ಕಂಚು ಪಡೆದು ಅಗ್ರಸ್ಥಾನವನ್ನು ಗಿಟ್ಟಿಸಿಕೊಂಡಿದೆ.

  ಪುಣೆ ವಿವಿಯ ಈಜುಗಾರ್ತಿ ಸಾಧ್ವಿ ಅವರು 2 ಚಿನ್ನವನ್ನು ಪಡೆದರು. ಮಿಹಿರ್ ಅಂಬ್ರೆ ಪ್ರಶಸ್ತಿಯನ್ನು ಉಳಿಸಿಕೊಂಡರು. ಇದರೊಂದಿಗೆ ಪುಣೆ ವಿವಿ 14 ಪದಕಗಳನ್ನು ಬಾಚಿಕೊಂಡಿದೆ. ಪಂಜಾಬ್ ವಿವಿ ಚಂಡಿಗಡದ ಸ್ಟಾರ್ ಈಜುಗಾರ ಸಿದ್ಧಾರ್ಥ ಸೆಜ್ವಾಲ್ 6 ಚಿನ್ನ 7 ಬೆಳ್ಳಿ ಮತ್ತು 5 ಕಂಚು ಪಡೆದು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಜೈನ್ ವಿವಿ ಬೆಂಗಳೂರು (6 ಚಿನ್ನ, 5 ಬೆಳ್ಳಿ, 1 ಕಂಚು) ಮೂರನೇ , ಗುರುನಾನಕ್ ವಿವಿ ಅಮೃತಸರ (6 ಚಿನ್ನ, 1 ಬೆಳ್ಳಿ , 5 ಕಂಚು) ನಾಲ್ಕನೇ ಮತ್ತು ಪಂಜಾಬ್ ವಿವಿ ಪಟಿಯಾಲ (3ಚಿನ್ನ, 4 ಬೆಳ್ಳಿ, 5 ಕಂಚು) ಐದನೇ ಸ್ಥಾನ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News