ಸರಕಾರಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಕುಮಾರಸ್ವಾಮಿ ಆಕ್ಷೇಪ

Update: 2020-02-26 05:51 GMT

ಬೆಂಗಳೂರು, ಫೆ.26: ಏಕಾಏಕಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ಈಗಾಗಲೇ ಬೆಲೆ ಏರಿಕೆಯಿಂದಾಗಿ ದೈನಂದಿನ ಜೀವನ ನಿರ್ವಹಣೆ ಮಾಡುವುದು ದುಸ್ತರವಾಗಿರುವಾಗಲೇ ಬಸ್ ದರ ಹೆಚ್ಚಳ ಮಾಡುವ ಅಗತ್ಯವಾದರೂ ಏನಿತ್ತು? ಸಾರಿಗೆ ನಿಗಮಗಳು ನಷ್ಟದಲ್ಲಿರುವುದರಿಂದ ಸರಿದೂಗಿಸಲು  ದರ ಹೆಚ್ಚಳ ಮಾಡಲಾಗಿದೆ ಎಂಬುದು ಸಮರ್ಥನಿಯ ಕಾರಣವಲ್ಲ. ಸಂಸ್ಥೆಗಳಲ್ಲಿ ಸೋರಿಕೆ ತಡೆಗಟ್ಟಲು ಸರ್ಕಾರ ಬಿಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.

ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಾಲ್ಕು ನಿಗಮಗಳ ಬಸ್ ದರ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವ ಬಂದಿತ್ತು.

ಆದರೆ, ಜನಸಾಮಾನ್ಯರಿಗೆ ಹೊರಯಾಗಬಾರದೆಂಬ ಕಾರಣಕ್ಕಾಗಿ ನಾನು ಇದಕ್ಕೆ ಅನುಮತಿ ನೀಡಿರಲಿಲ್ಲ. ಬಜೆಟ್ ಮಂಡನೆಗೂ ಮುನ್ನವೇ  ಬಸ್ ದರ ಹೆಚ್ಚಳ ಮಾಡಿರುವುದನ್ನು ಗಮನಿಸಿದರೆ, ಈ ಬಾರಿ ಬಿಜೆಪಿ ಸರ್ಕಾರ  ಅಯವ್ಯಯದಲ್ಲಿ "ಬೆಲೆಏರಿಕೆ" ಉಡುಗೊರೆ ನೀಡುವ ಮುನ್ಸೂಚನೆ ನೀಡಿದೆ ಎಂದು ಕುಮಾರಸ್ವಾಮಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News