ಸೋಂಕಿಲ್ಲದಿದ್ದರೂ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಕೊರೋನವೈರಸ್ ತುರ್ತು ಪರಿಸ್ಥಿತಿ!

Update: 2020-02-26 17:44 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಫೆ. 26: ಯಾವುದೇ ಕೊರೋನವೈರಸ್ ಸೋಂಕು ಪ್ರಕರಣ ದಾಖಲಾಗದಿದ್ದರೂ, ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ನಗರವು ಮಂಗಳವಾರ ಸ್ಥಳೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅದೇ ವೇಳೆ, ತಮ್ಮ ಊರುಗಳಲ್ಲಿ ಸೋಂಕು ಹರಡುವಿಕೆಯ ವಿರುದ್ಧ ಎಚ್ಚರದಿಂದಿರುವಂತೆ ಅಮೆರಿಕದ ಅಧಿಕಾರಿಗಳು ಜನರಿಗೆ ಕರೆ ನೀಡಿದ್ದಾರೆ.

ಕೊರೋನವೈರಸ್ ಎದುರಿಸಲು ತಾನು ನಡೆಸುತ್ತಿರುವ ಸಿದ್ಧತೆಗಳನ್ನು ಹೆಚ್ಚಿಸಲು ಹಾಗೂ ವೈರಸ್ ನಗರಕ್ಕೆ ಒಡ್ಡಬಹುದಾದ ಅಪಾಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹುಟ್ಟಿಸುವುದಕ್ಕಾಗಿ ತಾನು ಈ ಕ್ರಮ ತೆಗೆದುಕೊಂಡಿರುವುದಾಗಿ ಕ್ಯಾಲಿಫೋರ್ನಿಯ ರಾಜ್ಯದ ನಾಲ್ಕನೇ ಅತಿ ದೊಡ್ಡ ನಗರ ತಿಳಿಸಿದೆ.

‘‘ಸ್ಯಾನ್‌ಫ್ರಾನ್ಸಿಸ್ಕೊ ನಗರದಲ್ಲಿ ಕೊರೋನವೈರಸ್ ಸೋಂಕಿನ ಯಾವುದೇ ಪ್ರಕರಣ ದೃಢಪಡದಿದ್ದರೂ, ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಹಾಗಾಗಿ, ನಾವು ನಮ್ಮ ಸಿದ್ಧತೆಯನ್ನು ಹೆಚ್ಚಿಸಬೇಕಾಗಿದೆ’’ ಎಂದು ನಗರದ ಮೇಯರ್ ಲಂಡನ್ ಬ್ರೀಡ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News