ಕುನಾಲ್ ಕಾಮ್ರಾ ನಿರ್ಬಂಧ ಅವಧಿಯನ್ನು 3 ತಿಂಗಳಿಗೆ ಇಳಿಸಿದ ಇಂಡಿಗೋ

Update: 2020-02-27 11:32 GMT

ಹೊಸದಿಲ್ಲಿ: ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿರುವ ವೇಳೆ ಕಿರುಕುಳ ನೀಡಿದ್ದಾರೆಂಬ ಆರೋಪದಲ್ಲಿ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಇಂಡಿಗೋ ಸಂಸ್ಥೆ ಜನವರಿಯಲ್ಲಿ ವಿಧಿಸಿದ್ದ ನಿರ್ಬಂಧ ಅವಧಿಯನ್ನು ಮೂರು ತಿಂಗಳುಗಳಿಗೆ ಇಳಿಸಲಾಗಿದೆ. ಈ ಕುರಿತಂತೆ ವಿಮಾನಯಾನ ಸಂಸ್ಥೆಯ ಆಂತರಿಕ ಸಮಿತಿ ಇಂದು ಬೆಳಗ್ಗೆ 9:30ಕ್ಕೆ ಆದೇಶ ಜಾರಿಗೊಳಿಸಿದೆ ಎಂದು ಸಂಸ್ಥೆ ದಿಲ್ಲಿ ಹೈಕೋರ್ಟಿಗೆ ತಿಳಿಸಿದೆ.

ಇಂಡಿಗೋ ಈ ಹಿಂದೆ ಕಾಮ್ರಾ ವಿರುದ್ಧ ಆರು ತಿಂಗಳ ನಿರ್ಬಂಧ ವಿಧಿಸಿದ್ದರೆ ಏರ್ ಇಂಡಿಯಾ, ಸ್ಪೈಸ್ ಜೆಟ್ ಹಾಗೂ ಗೋ ಏರ್ ಮುಂದಿನ ಆದೇಶದ ತನಕ ನಿರ್ಬಂಧ ವಿಧಿಸಿದ್ದವು.

ಘಟನೆ ಜನವರಿ 28ರಂದು ಮುಂಬೈ-ಲಕ್ನೋ ನಡುವೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದಿತ್ತು. ತನ್ನ ಮೇಲೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಕಾಮ್ರಾ ಡಿಜಿಸಿಎಗೆ ಮೊರೆ ಹೋಗಿದ್ದರೂ ಅದು ವಿಮಾನಯಾನ ಸಂಸ್ಥೆಯನ್ನು ಬೆಂಬಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಳೆದ ವಿಚಾರಣೆ ವೇಳೆ ಡಿಜಿಸಿಎಯನ್ನು ತರಾಟೆಗೆ ತೆಗೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News