ಎನ್‍ ಪಿಆರ್ ಪ್ರಕ್ರಿಯೆ ತಡೆಹಿಡಿಯಲು ನಿರ್ಧರಿಸಿದೆ ಈ ರಾಜ್ಯ ಸರಕಾರ ?

Update: 2020-02-27 11:38 GMT

ಹೈದರಾಬಾದ್: ತೆಲಂಗಾಣ ರಾಜ್ಯ ಸರಕಾರ ರಾಜ್ಯದಲ್ಲಿ ಎನ್‍ ಪಿಆರ್ ಪ್ರಕ್ರಿಯೆಯನ್ನು ಸದ್ಯದ ಮಟ್ಟಿಗೆ ತಡೆ ಹಿಡಿಯಲು ನಿರ್ಧರಿಸಿದೆಯೆಂದು ತಿಳಿದು ಬಂದಿದೆ.

ಪರಿಷ್ಕೃತ ಎನ್ ಪಿಆರ್ ಪ್ರಕ್ರಿಯೆಯ ಬದಲು ಈ ಹಿಂದಿನ ಎನ್ ಪಿಆರ್ ವೇಳೆ ಅನುಸರಿಸಲಾದ ಮಾರ್ಗಸೂಚಿಯಂತೆಯೇ ಮುಂದುವರಿಯುವಂತೆ ಕೋರಿ ರಾಜ್ಯ ವಿಧಾನಸಭೆ ನಿರ್ಣಯ ಅಂಗೀಕರಿಸಲಿದೆ  ಎಂದೂ ಮೂಲಗಳು ತಿಳಿಸಿವೆ.

ಮುಂಬರುವ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಸಿಎಎ ವಿರೋಧಿ ನಿರ್ಣಯದ ಜತೆ ಮೇಲಿನ ನಿರ್ಣಯವನ್ನೂ ಅಂಗೀಕರಿಸಲಾಗುವುದೆಂದು ಹೇಳಲಾಗಿದೆ. ಈಗಿನ ನಿಯಮದಂತೆ ರಾಜ್ಯಗಳು ಎನ್ ಪಿಆರ್ ಪ್ರಕ್ರಿಯೆಯನ್ನು ಕೈಬಿಡಲು ಸಾಧ್ಯವಿಲ್ಲವಾದರೂ ಪಶ್ಚಿಮ ಬಂಗಾಳ ಮತ್ತು ಕೇರಳ ಸರಕಾರಗಳೂ ಎನ್ ಪಿಆರ್ ಪ್ರಕ್ರಿಯೆಯನ್ನು ಸದ್ಯ ತಡೆ ಹಿಡಿಯಲು ನಿರ್ಧರಿಸಿರುವುದರಿಂದ ಇದು ಕೇಂದ್ರದ ಮೇಲೆ ಸ್ವಲ್ಪ ಮಟ್ಟಿನ ಒತ್ತಡ ಹೇರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News